Friday, September 12, 2025
25 C
Bengaluru
Google search engine
LIVE
ಮನೆರಾಜಕೀಯರಾಮ ದೇಶದ ಅಸ್ಮಿತೆ ಆತ ರಾಜಕೀಯ ವಿಚಾರ ಅಲ್ಲ - ಹೆಂಡತಿಯನ್ನು ಬಿಡದ ರಾಮನಿಗೆ...

ರಾಮ ದೇಶದ ಅಸ್ಮಿತೆ ಆತ ರಾಜಕೀಯ ವಿಚಾರ ಅಲ್ಲ – ಹೆಂಡತಿಯನ್ನು ಬಿಡದ ರಾಮನಿಗೆ ಹೆಂಡತಿ ತೊರೆದ ಪ್ರಧಾನಿ ಹೇಗೆ? – ಹೆಚ್ ವಿಶ್ವನಾಥ್

ಮೈಸೂರು ; ರಾಮ ದೇಶದ ಅಸ್ಮಿತೆ ಆತ ರಾಜಕೀಯ ವಿಚಾರ ಅಲ್ಲ. ರಾಮ ನಮ್ಮ ದಮನಿ ದಮನಿಯಲ್ಲಿ ಇರುವವನು. ಅದರಿಂದ ಲೋಕಸಭೆಗೆ ಅನುಕೂಲವಾಗುತ್ತದೆ ಅನ್ನೋದು ಸರಿಯಲ್ಲ. ಹೆಂಡತಿಯನ್ನು ಬಿಡದ ರಾಮನಿಗೆ ಹೆಂಡತಿ ತೊರೆದ ಪ್ರಧಾನಿ ಹೇಗೆ? ಎಂದು ಎಂಎಲ್ ಸಿ ಹೆಚ್, ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು ಕೃತಜ್ಞತೆಯೇ ಇಲ್ಲದ ನಾಯಕ ಶಾಮನೂರು ಶಿವಶಂಕರಪ್ಪ ಹಣವಿದೆ ಎಲ್ಲರನ್ನೂ ಕೊಂಡುಕೊಳ್ಳಬಹುದು ಅಂದುಕೊಂಡಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ವಿರುದ್ದ ಕಿಡಿಕಾರಿದರು.

ನಮ್ಮ ಪ್ರತಿ ಊರಿನಲ್ಲೂ ರಾಮಮಂದಿರ ಕಟ್ಟಿದ್ದಾರೆ. ಅದನ್ನು ಮೋದಿ ಬಂದು ಕಟ್ಟಿಸಿದ್ದರಾ? ಹೆಂಡತಿಯನ್ನು ಬಿಡದ ರಾಮನಿಗೆ ಹೆಂಡತಿ ತೊರೆದ ಪ್ರಧಾನಿ ಹೇಗೆ? ಈ ರೀತಿ ಒಂದು ಸಂದೇಶ ಒಬ್ಬ ಯುವಕ ನನಗೆ ಕಳುಹಿಸಿದ್ದಾನೆ. ನಿಮ್ಮ ಚುನಾವಣೆಗೆ ಮುಖ್ಯ ಪ್ರಚಾರಕನಾಗಿ ರಾಮನನ್ನು ಬಳಸಿಕೊಳ್ಳಬೇಡಿ. ಬಡವರ ಹಸಿವಿನ ಬಗ್ಗೆ ದೇಶದ ಅಭಿವೃದ್ಧಿ ಬಗ್ಗೆ ಮಾತಾಡಿ ಎಂದರು.

ನಮ್ಮವರೇ ಸರಿ ಇಲ್ಲ, ಸಿಎಂ, ಮಂತ್ರಿಗಳು ಅವರ ಮೇಲೆ ಡಿಪೆಂಡ್
ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸಿ ಶ್ಯಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರ ಸಂಬಂಧ ಕೃತಜ್ಞತೆಯೇ ಇಲ್ಲದ ನಾಯಕ ಶ್ಯಾಮನೂರು ಶಿವಶಂಕರಪ್ಪ ಎಂದು ಹೆಚ್,ವಿಶ್ವನಾಥ್​ ವಾಗ್ದಾಳಿ ನಡೆಸಿದರು.

ನಮ್ಮವರೇ ಸರಿ ಇಲ್ಲ ಮುಖ್ಯಮಂತ್ರಿಗಳು ಅವರ ಮೇಲೆ ಡಿಪೆಂಡ್ ಆಗಿದ್ದಾರೆ. ಅಲ್ಲಿಗೆ ಹೋದಾಗ ಅವರ ಗೆಸ್ಟ್ ಹೌಸ್‌ನಲ್ಲೇ ಮಲಗುತ್ತಾರೆ. ಕಾಂಗ್ರೆಸ್ ಪಕ್ಷ ಜೀವಂತವಾಗಿದ್ದರೆ ಶಿವಕುಮಾರ್ ಬಂಡೆಯಾಗಿದ್ದರೆ ಅಮಾನತು ಮಾಡಿ. ಅವನು ಇಲ್ಲದಿದ್ದರೆ ಕಾಂಗ್ರೆಸ್ ನಡೆಯಲ್ವಾ? ಎಂದು ಏಕವಚನದಲ್ಲೇ ಹೆಚ್​ ವಿಶ್ವನಾಥ್ ಅವರು ಶ್ಯಾಮನೂರು ಶಿವಶಂಕರಪ್ಪ ವಿರುದ್ದ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷದಿಂದ ಶ್ಯಾಮನೂರು ಶಿವಶಂಕರ ಅವರನ್ನು ಹೊರಗೆ ತಳ್ಳಿ. ಶ್ಯಾಮನೂರು ಶಿವಶಂಕರಪ್ಪಗೆ ನಾಚಿಕೆ ಆಗಲ್ವಾ? ಎಂದು ವಿಶ್ವನಾಥ್ ಶಾಮನೂರು ಶಿವಶಂಕರಪ್ಪ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments