ಮೈಸೂರು: ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸುತ್ತಿದೆ.ಒಬ್ಬೊಬ್ಬರಿಗೆ 50 ಕೋಟಿ ರೂಪಾಯಿ ಆಫರ್ ಮಾಡಿದೆ. ಆದರೆ ಕಾಂಗ್ರೆಸ್ ಶಾಸಕರು ಯಾರು ಇದಕ್ಕೆ ಬಗ್ಗಿಲ್ಲ. 136 ಸ್ಥಾನವಿದ್ದರೂ ಬಿಜೆಪಿ ಸರ್ಕಾರ ಅಲ್ಲಾಡಿಸಲು ಪ್ರಯತ್ನ ಪಡುತ್ತಿದೆ. ಸರ್ಕಾರಗಳನ್ನ ಬೀಳಿಸುವುದು ಅಭ್ಯಸವಾಗಿ ಹೋಗಿದೆ. ನೇರವಾಗಿ ಅವರು ಯಾವತ್ತೂ ಚುನಾವಣೆ ಮಾಡಿಯೇ ಇಲ್ಲ. ದೇಶದ ಬೇರೆ ಬೇರೆ ಭಾಗಗಳಲ್ಲಿ ಸರ್ಕಾರ ಅಂತಂತ್ರ ಮಾಡುವ ರೀತಿ ಕರ್ನಾಟಕದಲ್ಲೂ ನಡೆದಿರುವುದು ಸತ್ಯ. ಎಂದು ಮೈಸೂರಿನಲ್ಲಿ ಸಿಎಂ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶವನ್ನು ಬಿಜೆಪಿ ಗುರಿಯಾಗಿಸಿಕೊಂಡಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಬಿಜೆಪಿ ಎಂದಿಗೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದೇ ಇಲ್ಲ. ಆಪರೇಷನ್ ಕಮಲ ಮಾಡಿಯೇ ಬಂದಿದ್ದಾರೆ. 113 ಕ್ಕಿಂತ ಹೆಚ್ಚು ಗೆದ್ದೇ ಇಲ್ಲ. 2018 ರಲ್ಲಿ 100 ಗೆದ್ದಿದ್ದರು. ಕರ್ನಾಟಕದಲ್ಲಿಯೂ ಆಪರೇಷನ್ ಕಮಲ ಪ್ರಯತ್ನ ಮಾಡುತ್ತಾರೆ. ಆದರೆ ನಮ್ಮ ಶಾಸಕರು ಅವರ ಆಸೆ ಆಮಿಷಗಳಿಗೆ ಬಲಿಯಾಗುವುದಿಲ್ಲ. ಅವರು ಈಗ 50 ಕೋಟಿ ಆಮಿಷವೊಡ್ಡುತ್ತಿದ್ದಾರೆ ಎಂದು ತಿಳಿಸಿದ್ರು.