ಮೈಸೂರು ; ಸಿಎಂ ಕಾರ್ಯಕ್ರಮದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಚೆಸ್ಕಾಂ ಎಂಡಿಯನ್ನ ಅಮಾನತುಗೊಳಿಸಲಾಗಿದೆ. ಸಿ.ಎನ್.ಶ್ರೀಧರ್ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳ್ಳುಸೋಗೆ ಗ್ರಾಮದಲ್ಲಿ ನಿನ್ನೆ ಸಿಎಂ ಕಾರ್ಯಕ್ರಮ ನಡೆಯುತ್ತಿತ್ತು. ನೀರಾವರಿ ಯೋಜನೆಗೆ ಸಿಎಂ ಚಾಲನೆ ನೀಡಬೇಕಿತ್ತು. ಸಿಎಂ ಬಟನ್ ಒತ್ತಿದಾಗ ಚಾಲನೆಯಾಗಲಿಲ್ಲ. ಇದ್ರಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ರು. ಇದೀಗ ವಿದ್ಯುತ್ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಿದ ಹಾಗೂ ಕಾರ್ಯಕ್ರಮಕ್ಕೂ ಗೈರಾಗಿದ್ದ ಚೆಸ್ಕಾಂ ಎಂಡಿ ಸಿ.ಎನ್.ಶ್ರೀಧರ್ನನ್ನು ಅಮಾನತುಗೊಳಿಸಲಾಗಿದೆ.