ರಾಜಕೀಯರಾಜ್ಯಸುದ್ದಿ

ಬಂಧಿಸಿರುವ ರೈತರನ್ನ ಬಿಡುಗಡೆ ಮಾಡಿ ಬಡಗಲಪುರ ನಾಗೇಂದ್ರ ಒತ್ತಾಯ

ಮೈಸೂರು ; ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೆಹಲಿ ಚಲೋ ಹಮ್ಮಿಕೊಂಡಿದ್ದ ರೈತರನ್ನು ಬಂಧಿಸಿರುವುದು ಖಂಡನೀಯ. ಬಂಧಿಸಿರುವ ರೈತರನ್ನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕೇಂದ್ರ ಸರ್ಕಾರವನ್ನ ಒತ್ತಾಯಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೆಹಲಿಯ ಚಲೋಗೆ ಹೊರಟಿದ್ದ ರೈತರ ಬಂಧನ ಖಂಡನೀಯ. ಪ್ರತಿಭಟನೆ ಮಾಡಲು ದೆಹಲಿಗೆ ರೈತರು ತೆರಳದ ರೀತಿಯಲ್ಲಿ ದೆಹಲಿ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ರೈತರನ್ನ ಎದುರು ಹಾಕಿಕೊಂಡು ಯಾವೊಂದು ಸರ್ಕಾರ ಹೆಚ್ಚಿನ ಕಾಲ ಉಳಿದಿಲ್ಲ.

ಕೇಂದ್ರ ಸರ್ಕಾರದ ಈ ದಬ್ಬಾಳಿಕೆಯನ್ನ ನಾವು ಖಂಡಿಸುತ್ತೇವೆ. ಸತತ 383 ದಿನದ ಹೋರಾಟಕ್ಕೆ ಅಂದು ಕೇಂದ್ರ ಸರ್ಕಾರ ಮಣಿದು ರೈತ ವಿರೋಧಿ ಕಾಯ್ದೆ ವಾಪಾಸ್ ಪಡೆಯಲು ನಿರ್ಧರಿಸಿತ್ತು. ಈಗ ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರ ನಡೆದುಕೊಂಡಿಲ್ಲ.

ಸಮಸ್ಯೆ ಬಗೆಹರಿಸಲು ಸರ್ಕಾರ ಕಾಲಾವಕಾಶ ಕೇಳಬೇಕಿತ್ತು. ಅದನ್ನ ಬಿಟ್ಟು ರೈತರ ಹೋರಾಟ ಹತ್ತಿಕ್ಕಲು ಮುಂದಾಗಿದೆ ಎಂದು ಕೇಂದ್ರದ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

https://www.youtube.com/watch?v=NWCrXRCviX4

Comments (0)

Your email address will not be published. Required fields are marked *

Back to top button