ಉದ್ಯಮ ಲೋಕದ ದೊರೆ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಪ್ರಿ ವೆಡ್ಡಿಂಗ್ ಸಂಭ್ರಮ ಜೋರಾಗಿದೆ. ಮೂರು ದಿನಗಳಿಂದ ಜಾಮ್‌ನಗರಕ್ಕೆ ಸ್ವರ್ಗವೇ ಧರೆಗಿಳಿದು ಕುಣಿಯುತ್ತಿರುವ ಹಾಗೆ ಭಾಸವಾಗುತ್ತಿದೆ, ಗುಜರಾತ್ ಝಗಮಗಿಸುತ್ತಿದೆ.
ಅಂತಾರಾಷ್ಟ್ರೀಯ ಕಲಾವಿದರು, ಟೆಕ್ ದೈತ್ಯರು, ವಾಣಿಜ್ಯೋದ್ಯಮಿಗಳು, ಬಾಲಿವುಡ್ ಸ್ಟಾರ್‌ಗಳು, ಕ್ರೀಡಾಪಟುಗಳು ಸೇರಿ ಹಲವರು ಆಗಮಿಸಿದ್ದಾರೆ. ಈ ವೇಳೆ ಮನೋರಂಜನೆ ನೀಡುವ ಕಲಾವಿದರಿಗೆ ಕೋಟಿ, ಕೋಟಿ ರೂಪಾಯಿಗಳನ್ನು ನೀಡಲಾಗಿದ್ದು, ಅದ್ರಲ್ಲೂ ಪೋಪ್ ಗಾಯಕಿ ರಿಯಾನರ 5 ನಿಮಿಷದ ಒಂದು ಹಾಡಿಗೆ ೭೪ ಕೋಟಿಯಂತೆ ,ಭಾರತದ ಸಂಗೀತ ಪ್ರಿಯರನ್ನ ಧ೦ಗಾಗಿಸಿದ ಅ ರಿಯಾನ ಯಾರು?
ಹೂ ಇಸ್ ರಿಯಾನಾ?
ಗಾಯಕಿ ರಿಯಾನಾ ಅವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಹಾಡುಗಳು ಹಿಟ್ ಮೇಲೆ ಹಿಟ್ಟಾಗಿವೆ. 21ನೇ ಶತಮಾನದ ಸಂಗೀತಾ ಲಹರಿಯಂದೆ ಖ್ಯಾತರಾದ ಗಾಯಕಿ ರಿಯಾನಾ. ಅವರ ಬಗ್ಗೆ ಯುವ ಜನತೆಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ.ತನ್ನ ಕಂಠದ ಮೂಲಕ ಜಗತ್ತಿನ ಅಸಂಖ್ಯಾತ ಸಂಗೀತ ಪ್ರಿಯರನ್ನ ಸೆಳೆದಿದ್ದಾರೆ. ದೂರದ ಬಾರ್ಬೆಡೋಸ್ ದೇಶದಿಂದ ಬಂದಿರುವ ಅವರಿಗೆ 36 ವರ್ಷ ವಯಸ್ಸು. ವಿಶ್ವದ ಅತಿ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ರಿಯಾನಾ ಹೆಸರು ಕೂಡ ಇದೆ.ಫೆಬ್ರವರಿ 20, 1988 ರಲ್ಲಿ ಬಾರ್ಬೆಡೋಸ್ ದೇಶದಲ್ಲಿ ಹುಟ್ಟಿದ ರಿಯಾನಾ ಅಲ್ಪಾವಧಿಯಲ್ಲೇ ಖ್ಯಾತ ಗಾಯಕಿಯಾಗಿ ಗುರುತಿಸಿಕೊಂಡರು ,ಜಗತ್ತಿನ ಶ್ರೀಮಂತರೆಲ್ಲ ತಮ್ಮ ಪ್ರತಿಷ್ಠೆ ತೋರ್ಪಡಿಸಲು ರಿಯಾನಾರನ್ನ ಕರೆಸಿಕೊಳ್ಳುತ್ತಾರೆ.
ಗುಜರಾತ್ನ ಜಾಮ್ನಗರ್ ವಿಮಾನ ನಿಲ್ದಾಣದಲ್ಲಿ ರಿಯಾನಾ ಬಂದಿಳಿದ ಸಂದರ್ಭ , ರಿಯಾನಾ ಅವರ ಲಗೇಜ್ಗಳನ್ನು ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿತ್ತು. ಐದು ನಿಮಿಷದ ಹಾಡಿಗೆ ಹಡಗಿನಷ್ಟು ಲಗೇಜಾ ಎಂದು ನೆಟ್ಟಿಗರು ಆಶ್ಚರ್ಯ ಪಟ್ಟಿದ್ದರು.
ಆಕೆಯ ಹಾಡಿನ ಶೈಲಿ ಮತ್ತು ಆಕೆಯ ಫೇಸ್ ಎಕ್ಸ್ಪ್ರೆಷನ್ ಭಾರತೀಯ ಸಂಗೀತ ರಸಿಕರನ್ನ ಇನ್ನಿಲ್ಲದೆ ಸೆಳೆದಿರುವುದು ಸುಳ್ಳಲ್ಲ,ಉಸಿರು ಬಿಗಿ ಹಿಡಿದುಕೊಂಡು ಸುದೀರ್ಘವಾಗಿ ಹಾಡೋ ರಿಯಾನಾ ಮಾತ್ರ ಭಾರತೀಯರ ಪಾಲಿಗೆ ಇಷ್ಟ ಗಾಯಕಿಯಾಗಿ ಮಾರ್ಪಟ್ಟಿದ್ದಾರೆ.