ಸಿನಿಮಾಸುದ್ದಿ

ಶೈನಿಂಗ್ ಸ್ಟಾರ್ ಸುಬ್ರಮಣಿ..ಅಂಗಿ, ಲುಂಗಿ, ಮೂಲಂಗಿ..!

ಮಿಸ್ಟರ್ ಅಂಡ್ ಮಿಸೆಸ್ ಮನ್ಮಥ ಸಿನಿಮಾ ಇಂದಿಗೆ ತೆರೆ ಕಂಡು ಭರ್ತಿ 175 ದಿನ ಪೂರ್ಣ ಗೊಳಿಸಿದೆ…ಈ ಸಿನಿಮಾದಲ್ಲಿ ಏನಿದೆ ಅನ್ನೋರ ಬಾಯಿ ಮೇಲೆ ಬೆಟ್ಟು ಇಟ್ಟುಕೊಳ್ಳುವಂತೆ ಮಾಡಿದೆ.. ಕೌಟುಂಬಿಕ ವ್ಯವಸ್ಥೆಯ ತೆಳು ಗೆರೆಯನ್ನು ಆ ಕಡೆ ಈ ಕಡೆ ಎಳೆದಾಡಿ ಸೃಷ್ಟಿಯಾಗುವ ಪ್ರಸಂಗಗಳು ಸಂಪೂರ್ಣ ನಗೆಯ ಬುಗ್ಗೆಯನ್ನೇ ಎಬ್ಬಿಸುತ್ತವೆ..ಈ ಕಾಮಿಡಿಯೇ ಸಿನಿಮಾವನ್ನ ಥಿಯೇಟರ್ ನಲ್ಲಿ ನಿಲ್ಲುವಂತೆ ಮಾಡಿದೆ.


‘ಮಿಸ್ಟರ್ ಅಂಡ್ ಮಿಸಸ್ ಮನ್ಮಥ’ ಚಿತ್ರದ ಹಾಡುಗಳು ಕೂಡ ಸೂಪರ್ ಆಗಿದ್ದು, ಅವು ಕೂಡ ಪ್ರೇಕ್ಷಕರನ್ನ ಥಿಯೇಟರ್ನಲ್ಲಿ ಕೂರುವಂತೆ ಮಾಡುತ್ತವೆ.. ಈ ಹಿಂದೆ ಹಾಸ್ಯನಟ ಕಾಶೀನಾಥ್ ಅವರು ಮನ್ಮಥನ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದರು, ಈಗ ಮಿ.ಅಂಡ್ ಮಿಸಸ್ ಮನ್ಮಥನಾಗಿ ಶೈನಿಂಗ್ ಸ್ಟಾರ್ ಸುಬ್ರಮಣಿ ಮನ್ಮಥನಾಗಿ ಕಾಣಿಸಿಕೊಂಡಿದ್ದಾರೆ…ಚಿತ್ರರಂಗಕ್ಕೆ ಈತ ಹೊಸ ಎಂಟ್ರಿಯಾಗಿದ್ರು, ತನ್ನ ಕಲಾ ಅನುಭವವನ್ನೆಲ್ಲಾ ಧಾರೆ ಎರೆದು ಸಿನಿಮಾದ ಗೆಲುವಿಗೆ ಕಾರಣರಾಗಿದ್ದಾರೆ.

ಮೂರು ದಶಕಗಳಿಂದ ಧಾರಾವಾಹಿ, ಸಿನಿಮಾ, ನಾಟಕ ಹೀಗೆ ತೊಡಗಿ ಕೊಂಡಿರುವ ಎ.ಸುಬ್ರಮಣಿ ರಾಮಗೊಂಡನಹಳ್ಳಿ ಈ ಚಿತ್ರದ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದಾರೆ… ಜೊತೆಗೆ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸುಬ್ರಮಣಿ ಅವರಿಗೆ ರಿಯಲ್ ಎಸ್ಟೇಟ್ ವ್ಯವಹಾರದ ಹಿನ್ನೆಲೆ ಇದ್ದು ಕಷ್ಟಪಟ್ಟು ದುಡಿದ ದುಡ್ಡಲ್ಲಿ ಸಿನಿಮಾ ಮಾಡಿದ್ದಾರೆ.

ಇದು ಶ್ರೀಮಂತ ಹಾಗೂ ಆಧುನಿಕ ಮನ್ಮಥನ ಕಥೆಯಾಗಿದ್ದು, ಚಿತ್ರದಲ್ಲಿ ಶಕುಂತಲಾ, ಚಂದನಾ ಹಾಗೂ ವೈಶಾಲಿ ಎಂಬ ಮೂವರು ನಟಿಯರು ಜೊತೆಗೆ ಅಭಿನಯಿಸಿದ್ದಾರೆ. ವೈಶಾಲಿ ತೃತೀಯ ಲಿಂಗಿ ಅನ್ನೋದು ತಾರಾಬಳಗ ಹೈಲೈಟ್.. ಸಿನಿಮಾ ಎಂಬುದು 90ರ ದಶಕದಿಂದ ಜೊತೆಗೆ ಬಂದ ಆಸಕ್ತಿ. ಇಲ್ಲಿ ಶ್ರೀಮಂತನ ಹಣ ಲಪಾಟಾಯಿಸಲು ಹುಡುಗಿಯರನ್ನು ಬಿಟ್ಟು ಪ್ರಯತ್ನಿಸಿ ವಿಫಲವಾಗುವ ಕಥೆಯನ್ನು ಹಾಸ್ಯದ ಧಾಟಿಯಲ್ಲಿ ಹೇಳಲಾಗಿದೆ.

ಬೆಂಗಳೂರು, ಅರಸೀಕೆರೆ, ಮಂಗಳೂರು ಮತ್ತು ಉಡುಪಿ ಸುತ್ತಮತ್ತ ಚಿತ್ರೀಕರಣ ನಡೆಸಲಾಗಿದ್ದು ರಾಜ್ಯದ ಸೊಬಗನ್ನ ಕೆಮರಾಮನ್ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.. ಸಂಗೀತ ನಿರ್ದೇಶಕ ಕೆವಿನ್ ಎಂ. ಅವರಿಗೆ ಇದು ಎಂಟನೆ ಚಿತ್ರ..ಅವರ ಭತ್ತಳಿಕೆ ಯಿಂದ ಅಧ್ಬುತ ಸಂಗೀತ ಹೊರ ಬಿದ್ದಿರೋದು ಸಿನಿಮಾದ ಉದ್ದಕ್ಕೂ ಕಾಣುತ್ತದೆ.

ಬಸವರಾಜ, ರವಿ ಕುಂದಾಪುರ ತಾರಾ ಬಳಗದಲ್ಲಿ ಇದ್ದಾರೆ. ವಿಜಯರಾಜ್ ಕಥೆ-ಸಂಕಲನ, ರವಿಶ್ರೀ ಮಾರುತಿ ಸಹ ನಿರ್ದೇಶನ ಮತ್ತು ಸಂಭಾಷಣೆ, ರವಿ ಛಾಯಾಗ್ರಹಣ, ಜೈಪ್ರಕಾಶ್ ನೃತ್ಯ ನಿರ್ದೇಶನ, ಶಿವು ಸಾಹಸ ನಿರ್ದೇಶನ ಚಿತ್ರಕ್ಕಿದೆ. ಒಟ್ನಲ್ಲಿ ಈ ಸಿನಿಮಾ 200 ದಿನದತ್ತ ಮುನ್ನಗಲಿ ಅನ್ನೋದು ಎಲ್ಲರ ಆಶಯ..

Comments (0)

Your email address will not be published. Required fields are marked *

Back to top button