ಮಂಗಳೂರು : ನಮ್ಮ ರಾಮ ಕೋಮುವಾದಿ ರಾಮನಲ್ಲ ಬದಲಾಗಿ ಆತ ಕುಟುಂಬ ಸಮೇತನಾದ ರಾಮ. ನಮಗೆ ಕೋಮುವಾದಿ ರಾಮ ಬೇಕಾಗಿಲ್ಲ. ನಮಗೆ ಹೊಂದಿಸಿಕೊಂಡು ಹೋಗುವ ರಾಮ ಬೇಕು ಎಂದು ಮಂಗಳೂರು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಗಳ ಜೋತೆ ಯುವಜನ ಸೇವೆ, ಕ್ರೀಡಾ ಸಚಿವ ಬಿ. ನಾಗೇಂದ್ರ ಹೇಳಿದರು.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ರಾಮ ನಮಗೂ ದೇವರೇ. ರಾಮ ಬಿಜೆಪಿಗೆ ಮಾತ್ರವಲ್ಲ ಕಾಂಗ್ರೆಸ್ ಸೇರಿದಂತೆ, ಇಡೀ ಭಾರತೀಯರಿಗೂ ದೇವರೇ. ಆದರೆ ಭಗವಾನ್ ರಾಮನೇ ಬೇರೆ, ರಾಜಕೀಯ ಪಕ್ಷದ ಕೋಮುವಾದಿ ರಾಮನೇ ಬೇರೆ ನಾವು ಚಿಕ್ಕಂದಿನಿಂದಲೇ ರಾಮ ಭಜನೆ ಮಾಡಿ ಬೆಳೆದವರು.
ನಾನು ವಾಲ್ಮೀಕಿ ಸಮಾಜದ ವ್ಯಕ್ತಿ. ಆದ್ದರಿಂದ ನಮಗೆ ಕೋಮುವಾದಿ ರಾಮ ಬೇಡ. ರಾಮಮಂದಿರಕ್ಕೆ ನಾವು ಕರೆದ್ರೆ ಖಂಡಿತಾ ಹೋಗಿಯೇ ಹೋಗುತ್ತೇವೆ. ಹೇಳಿದರು
ರಾಮಮಂದಿರದಲ್ಲಿ ನಮ್ಮ ಭಾಗವೂ ಇದೆ. ನೆಹರೂ ಅವರು ಅಂದು ತಮ್ಮ ಪ್ರಣಾಳಿಕೆಯಲ್ಲೇ ರಾಮಮಂದಿರ ಮಾಡ್ತೀವಿ ಅಂದಿದ್ದರು. ರಾಮ ನಮ್ಮ ದೇಶದ ಮತ್ತು ನಾಡಿನ ಆಸ್ತಿ. ಅದಕ್ಕಾಗಿ ಆತನ ಮಂದಿರಕ್ಕೆ ಯಾರೂ ಕರೆಯಬೇಕಾಗಿಲ್ಲ, ನಾವೇ ಹೋಗುತ್ತೇವೆ. ಯಾರೂ ಹೋಗಬೇಡಿ ಅಂದಿಲ್ಲ, ಕುಟುಂಬ ಸಮೇತ ರಾಮನಲ್ಲಿಗೆ ಹೋಗ್ತೇವೆ ಎಂದು ಹೇಳಿದರು.
ಇಂದಿನ ಮಸೀದಿಗಳು ಹಿಂದೆ ದೇವಸ್ಥಾನಗಳಾಗಿತ್ತು. ಅದನ್ನೆಲ್ಲಾ ಒಡೆದು ಹಾಕ್ತೇವೆ ಎಂಬ ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಬಿ. ನಾಗೇಂದ್ರ, ಅನಂತ್ ಕುಮಾರ್ ಹೆಗಡೆ ಜಾತಿ ಧರ್ಮ ಬೇರೆ ಮಾಡಿಯೇ ರಾಜಕಾರಣ ಮಾಡಿದವರು. ಶಾಂತಿ ಕದಡಿ ರಾಜಕೀಯ ಲಾಭ ಪಡೆಯುವ ವ್ಯಕ್ತಿ. ಅವರು ಹೇಳಿದ್ದು ಎಲ್ಲಿಯೂ ಉಲ್ಲೇಖವಿಲ್ಲ. ನಾವೆಲ್ಲ ಅಣ್ಣತಮ್ಮಂದಿರಂತೆ ಬದುಕುತ್ತಿದ್ದೇವೆ.
ಯಾವುದೇ ಪುಸ್ತಕಗಳಲ್ಲಿ ಮಸೀದಿಗಳು ದೇವಸ್ಥಾನ ಆಗಿತ್ತು ಎಂಬ ಉಲ್ಲೇಖವಿಲ್ಲ. ಅವರಿಗೆ ತಲೆಯಲ್ಲಿ ಬಂದಿದ್ದನ್ನು ಹೇಳಿಕೊಂಡು ಹೋಗುತ್ತಿದ್ದಾರೆ. ಎರಡು ಮೂರು ವರ್ಷಗಳಿಂದ ಎಲ್ಲೂ ಕಾಣದಿದ್ದ ಅವರು, ಚುನಾವಣೆ ಹೊತ್ತಲ್ಲಿ ರಾಜಕೀಯ ಮಾಡಲು ಬಂದಿದ್ದಾರೆ ಎಂದರು.
ರಾಜ್ಯ ಸದ್ಯ ಶಾಂತಿಯುತವಾಗಿದೆ. ಶಾಂತಿ ಕದಡಿದ್ರೆ ಎದುರಿಸಲು ಸರ್ಕಾರ ಸಮರ್ಥವಾಗಿದೆ. ಗೋಪಾಷ್ಠಮಿ ಶಾಪ ಅನ್ನೋದು ಸರಿಯಲ್ಲ, ಅದು ಆ ದಿನ ಕಾಕತಾಳೀಯ ಇರಬಹುದು. ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸರಿ ಅನ್ನುವ ಥರ ಆಗಿದೆ. ಆದ್ದರಿಂದ ಇವರ ಮಾತಿಗೆ ನಾವು ಹೆಚ್ಚು ಪ್ರಾಮುಖ್ಯತೆ ಕೊಡಲ್ಲ. ಅನಂತ್ ಕುಮಾರ್ ಮಾತ್ರವಲ್ಲ. ಇಡೀ ಬಿಜೆಪಿಯೇ ಹಾಗೆ ಅವರ ಸಂಸ್ಕಾರ, ಸಂಸ್ಕೃತಿ ಏನು ಎಂದು ಅವರ ಮಾತು ದೃಢಪಡಿಸುತ್ತದೆ ಎಂದು ಬಿ.ನಾಗೇಂದ್ರ ಹೇಳಿದರು.