ಮಂಗಳೂರು : ಏರ್ಪೋಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ತುಂಬಾನೇ ಅಲರ್ಟ್ ಆಗಿರ್ತಾರೆ. ಯಾಕೆಂದರೆ ಕೆಲ ಖದೀಮರು ನಿಷೇಧಿತ ವಸ್ತುಗಳನ್ನು ಹೊರ ದೇಶಗಳಿಂದ ತರ್ತಾರೆ. ಇನ್ನು ಏರ್ ಪೋರ್ಟ್ಗೆ ಬಂದಿಳಿದ ಕೂಡಲೇ ಈ ಕಳ್ಳರು ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಲು ನಾನಾ ಸರ್ಕಸ್ ಮಾಡ್ತಾರೆ. ಆದರೆ ನಮ್ಮ ಕಸ್ಟಮ್ಸ್ ಅಧಿಕಾರಿಗಳು ಮೈಯೆಲ್ಲಾ ಕಣ್ಣಾಗಿಸಿಕೊಂಡು ಪರಿಶೀಲನೆ ಮಾಡ್ತಾರೆ. ಹೀಗಾಗಿ ಖದೀಮರಿಗೆ ತಮ್ಮ ಕಾರ್ಯ ಸಾಧಿಸಿಕೊಳ್ಳೋದು ಬಹಳನೇ ಕಷ್ಟ.
ಮಂಗಳೂರಿನಲ್ಲಿ ಆಗಿದ್ದು ಇದೇ. ಇಮಿಗ್ರೇಷನ್ ಆಗಮನ ಪ್ರದೇಶದಲ್ಲಿನ ವಾಶ್ರೂಮ್ನಲ್ಲಿ
ಬೆಲೆ ಬಾಳುವ ಚಿನ್ನ ಬಚ್ಚಿಡಲಾಗಿತ್ತು. ಡ್ರೈನೇಜ್ ಚೇಂಬರ್ನಲ್ಲಿ ಕಪ್ಪು ಬಣ್ಣದ ಚೀಲದೊಳಗೆ ಪೇಸ್ಟ್ ರೂಪದಲ್ಲಿರುವ ಚಿನ್ನ ಕಂಡುಬಂದಿದೆ. ಇದರ ಒಟ್ಟು ತೂಕ 733 ಗ್ರಾಂ. ಟಾಯ್ಲೆಟ್ ನಲ್ಲಿ ಚಿನ್ನವಿಟ್ಟ ವ್ಯಕ್ತಿ ಇನ್ನು ಪತ್ತೆಯಾಗಿಲ್ಲ.ಕಸ್ಟಮ್ಸ್ ಅಧಿಕಾರಿಗಳು ಕಳ್ಳಸಾಗಣೆ ಮಾಡಿದ ವ್ಯಕ್ತಿ ಹಾಗೂ ಚಿನ್ನದ ಮೂಲ ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದಾರೆ. ಇನ್ನು ಹೀಗೆ ವಾಶ್ ರೂಮ್ನಲ್ಲಿ ಸಿಕ್ಕದ ಚಿನ್ನದ ಮೌಲ್ಯ – 45,44,600 ರೂಪಾಯಿ.