ಮಂಡ್ಯ : ಎಸ್ಇಟಿ ಶಾಲೆಯ ಶಿಕ್ಷಕಿಯನ್ನು ಯೋಗಾನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕೊಲೆ ಮಾಡಿ ಮಣ್ಣಿನಲ್ಲಿ ಹೂತು ಹಾಕಿ ತಲೆ ಮರೆಸಿಕೊಂಡಿದ್ದ ಆರೋಪಿ ನಿತೀಶ್ನನ್ನು ಮಂಡ್ಯ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಟೀಚರ್ ಕೊಲೆ ಪ್ರಕರಣದ ಸಂಬಂಧ ಆರೋಪಿಯನ್ನು ತೀವ್ರ ತನಿಖೆ ನಡೆಸ್ತಿರೋ ಪೊಲೀಸರು ಹೆಚ್ಚುವರಿ ಎಸ್ಪಿ ನೇತೃತ್ವದ ತನಿಖಾ ತಂಡದಿಂದ ಆರೋಪಿ ಬಂಧಿಸಿದ್ದಾರೆ.
ಅದೇ ಗ್ರಾಮದ ನಿತೀಶ್(26) ಟೀಚರ್ ದೀಪಿಕಾಳನ್ನು ಮೇಲುಕೋಟೆಯ ನಿರ್ಜನ ಪ್ರದೇಶದಲ್ಲಿ ಹತ್ಯೆ ಮಾಡಿ ಶವ ಹೂತ್ತಿಟ್ಟು, ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ತಲೆ ಮರೆಸಿಕೊಂಡಿದ್ದನು. ಆರೋಪಿಯ ಮೊಬೈಲ್ ಲೊಕೇಶನ್ ಆಧರಿಸಿ ಹೊಸಪೇಟೆಯಲ್ಲಿ ಆರೋಪಿ ನಿತೀಶ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.


