ಮಂಡ್ಯದಲ್ಲಿ ಸ್ಟಾರ್ ಚಂದ್ರು ಹವಾ ಶುರುವಾಗಿದೆ. ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಕಾಂಗ್ರೆಸ್ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆಯಾಗಿದೆ. ಮೈತ್ರಿ ಬಿಕ್ಕಟ್ಟಿನಲ್ಲಿ ಸ್ಟಾರ್ ಚಂದ್ರುಗೆ ಲಾಭ ಆಗುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ. ಸ್ಟಾರ್ ಚಂದ್ರು ಹೆಸರು ಫೈನಲ್ ಆಗುತ್ತಲೇ ಹಳ್ಳಿ ಹಳ್ಳಿಗಳಿಗೆ ತೆರಳಿ ಪ್ರಚಾರ ಆರಂಭಿಸಿದ್ದಾರೆ.
ಸ್ಟಾರ್ ಬಿಲ್ಡರ್ ಮಾಲೀಕರು ಆಗಿರುವ ಸ್ಟಾರ್ ಚಂದ್ರುಗೆ ಕ್ಷೇತ್ರದಲ್ಲಿ ಭಾರಿ ಬಲವಿದೆ. ಮೂಲತಃ ನಾಗಮಂಗಲದವರಾದ ಚಂದ್ರುಗೆ ಸ್ಥಳೀಯತೆಯ ಬಲದ ಜೊತೆಗೆ ಮಂಡ್ಯದ ಜನತೆ ಸಾಂಪ್ರದಾಯಿಕ ರಾಜಕಾರಣಿಗಳಿಗೆ ಪರ್ಯಾಯ ಬೇಕಿದೆ. ಇನ್ನು ಸುಮಲತಾ ಕಾರಣಕ್ಕೆ ಜೆಡಿಎಸ್ -ಬಿಜೆಪಿ ನಡುವೆ ಬಿಕ್ಕಟ್ಟಿದೆ.
ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ ಸ್ಟಾರ್ ಚಂದ್ರು ಗೆದ್ದು ಬೀಗುವ ಸಾಧ್ಯತೆ ಹೆಚ್ಚಾಗಿದೆ. ಒಂದು ಕಡೆ ಸುಮಲತಾ ಬಿಜೆಪಿಯಿಂದ ನನಗೆ ಟಿಕೆಟ್ ಕೊಡಿ ಅನ್ನುತ್ತಿದ್ರೆ, ಇತ್ತ ಮಂಡ್ಯ ನನಗೆ ಬೇಕು ಅಂತ ಜೆಡಿಎಸ್ ಪಟ್ಟು ಹಿಡಿದಿದೆ. ಈ ಮಧ್ಯೆ ಕಾಂಗ್ರೆಸ್ ಸ್ಟಾರ್ ಚಂದ್ರುರವರನ್ನ ಕಣಕ್ಕೆ ಇಳಿಸಿದೆ. ಮೊದಲೇ ಅಭ್ಯರ್ಥಿ ಘೋಷಣೆಯಾಗಿರುವುದು ಕಾಂಗ್ರೆಸ್ ಪಾಲಿಗೆ ವರದಾನವಾಗಿದೆ. ಮೈತ್ರಿ ಕಗ್ಗಂಟಿನಲ್ಲಿ ಜೆಡಿಎಸ್ ಬಿಜೆಪಿ ಮತಗಳು ಧೃವಿಕರಣ ಕಷ್ಟಸಾಧ್ಯ ಎನ್ನಲಾಗುತ್ತಿದೆ. ಇನ್ನು ಕಾಂಗ್ರೆಸ್ ನ ಏಳು ಶಾಸಕರು ಲೋಕಸಭಾಕ್ಷೇತ್ರದಲ್ಲಿರೋದ್ರಿಂದ ಸ್ಟಾರ್ ಚಂದ್ರುಗೆ ಲಾಭದ ವಾತಾವರಣವಿದೆ.
ಕಾಂಗ್ರೆಸ್ ಶಾಸಕರ ಬೆಂಬಲದೊಂದಿಗೆ ಮುನ್ನುಗ್ಗುತ್ತಿರುವ ಸ್ಟಾರ್ ಚಂದ್ರು, ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರು, ಇವರ ಸಹೋದರ ಕೂಡ ಶಾಸಕರಾಗಿದ್ದ, ಬಚ್ಚೇಗೌಡರ ಸಂಬಂಧಿಯೂ ಆಗಿದ್ದಾರೆ. ಇದರ ಜೊತೆಗೆ ಡಿಕೆಶಿ ಬೆಂಬಲ ಕೂಡ ಸ್ಟಾರ್ ಚಂದ್ರುಗೆ ಇದೆ. ಹೀಗಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಸ್ಟಾರ್ ಚಂದ್ರು ಗೆದ್ದು ಬೀಗ್ತಾರಾ ಕಾದು ನೋಡಬೇಕು.