ಮಂಡ್ಯ: ಲೋಕಸಭಾ ಚುನಾವಣೆ ಇನ್ನೇನು ಹತ್ತಿರವಾಗುತ್ತಿವೆ. ಕಳೆದ ಬಾರಿ ಇಡೀ ದೇಶದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರ ಈ ಬಾರಿಯೂ ಕೂಡ ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತಿದೆ. ಈ ಬಾರಿಯೂ ಮಾಜಿ ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದಲೇ ಸ್ಪರ್ಧೆ ಮಾಡಲು ಬಹುತೇಕ ಫಿಕ್ಸ್ ಎಂದು ಎನ್ನಲಾಗುತ್ತಿದೆ.
ಈಗಾಗಲೆ ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿ ಮಂಡ್ಯ ಕ್ಷೇತ್ರವನ್ನ ಜೆಡಿಎಸ್ ಪಡೆದುಕೊಂಡಿದೆ. ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯಕ್ಕೆ ಕಾಂಗ್ರೆಸ್ ಎಂಟ್ರಿಕೊಟ್ಟಿದೆ. ಆದರೆ ಜೆಡಿಎಸ್ ಮಂಡ್ಯವನ್ನು ಮತ್ತೆ ತಮ್ಮ ತೆಕ್ಕೆಗೆ ಪಡೆಯಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿಯೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿಯವರನ್ನು ಸ್ಪರ್ಧಿಸುವಂತೆ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರು ಮಂಡ್ಯದಲ್ಲಿ ನಡೆದ ಸಭೆಯಲ್ಲಿ ಮನವಿ ಮಾಡಿದ್ದಾರೆ
ರಾಜ್ಯದಲ್ಲಿ ಜೆಡಿಎಸ್ ಉಳಿದಿದೆ ಎಂದರೆ ಮಂಡ್ಯ ಜಿಲ್ಲೆಯಿಂದ ಮಾತ್ರ. ನಾವು ಮಂಡ್ಯ ಜಿಲ್ಲೆಯನ್ನ ಈ ಬಾರಿ ನಾವು ಕಳೆದುಕೊಂಡ್ರೆ ಇದ್ದು ಸತ್ತಂತೆ. ಯಾವುದೇ ಕಾರಣಕ್ಕೂ ಈ ಬಾರಿ ಮಂಡ್ಯ ಜಿಲ್ಲೆ ಕಳೆದುಕೊಳ್ಳಬಾರದು. ನಿಮ್ಮ ಭಾವನೆಗೆ ಖಂಡಿತ ಸ್ಪಂಧಿಸುತ್ತೇನೆ, ನಿಮಗೆ ನಿರಾಸೆ ಮಾಡಲು ನಾನು ತಯಾರಿಲ್ಲ ಎಂದು ಹೇಳುವ ಮೂಲಕ ಕಾರ್ಯಕರ್ತರ ಮನವಿಗೆ ಪಾಸಿಟಿವ್ ರೆಸ್ಪಾನ್ಸ್ ನೀಡಿದ್ದಾರೆ. 2019 ರಲ್ಲಿ ನಿಖಿಲ್ನನ್ನ ಕುತಂತ್ರದ ಸೋಲಿಗೆ ಕಾರಣರಾದವರನ್ನ, ಜೆಡಿಎಸ್ ಮುಗಿಸಲು ಹೊರಟವರಿಗೆ ನೀವೇ ಉತ್ತರ ಕೊಡಿ ಎಂದು ಎಚ್ಡಿಕೆ ಕರೆಕೊಟ್ಟರು.