ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ನಡೆಯುತ್ತಿತ್ತು ಲಂಚಗುಳಿತನ. ಬೇಸತ್ತ ನಾಗರಿಕರು ಸಚಿವರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ದಿಢೀರ್ ಭೇಟಿ ನೀಡಿದ ಸಚಿವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಘಟನೆ ನಡೆದಿರುವುದು ಮಂಡ್ಯ ಜಿಲ್ಲೆಯ ಮದ್ದೂರು ಸಬ್ ರಿಜಿಸ್ಟರ್ ಕಚೇರಿಯಲ್ಲಿ. ಲಂಚ ಗುಳಿತನ ನಡೆಯುತ್ತಿದ್ದ ಕಚೇರಿ ಶಾಸಕ ಉದಯ್ ಕಚೇರಿ ಸಮೀಪವಿದೆ. ಆದರೂ ಅಲ್ಲಿ ಪ್ರತಿನಿತ್ಯ ಲಂಚಗುಳಿತನ ನಡೆಯುತ್ತಲೇ ಇತ್ತು. ಇದರಿಂದ ಬೇಷತ್ತ ಜನರು ಸಚಿವ ಕೃಷ್ಣಭೈರೇಗೌಡರಿಗೆ ದೂರು ನೀಡಿದರು. ಇಂದು ದಿಢೀರ್ ಭೇಟಿ ನೀಡಿದ ಸಚಿವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜೊತೆಯಲ್ಲಿದ್ದ ಶಾಸಕರೇ ಮೂಕ ಪ್ರೇಕ್ಷಕರಾಗಿ ನಿಂತಿದ್ದರು.
ಕಂದಾಯ ಸಚಿವ ಕೃಷ್ಣಭೈರೇಗೌಡ, ಪ್ರತಿನಿತ್ಯ ಕಚೇರಿಗಳಿಗೆ ದಿಢೀರ್ ಭೇಟಿ ನೀಡುವುದು ಸಾಮಾನ್ಯ. ಇದೇ ಮಾದರಿಯಲ್ಲಿ ಮದ್ದೂರು ಸಬ್ ರಿಜಿಸ್ಟರ್, ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಪರಿಶೀಲನೆ ವೇಳೆ ಮಧ್ಯವರ್ತಿಗಳು ಕಂಡು ಬಂದ ಹಿನ್ನೆಲೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೀವೇನು ಸತ್ಯ ಹರಿಶ್ಚಂದ್ರರ ಎಂಬ ಪ್ರಶ್ನೆಯೊಂದಿಗೆ ಅಧಿಕಾರಿಗಳಿಗೆ ಬೆವರಳಿಸಿದರು.
ರೈತರು ಹಾಗೂ ಸಾಮಾನ್ಯ ಜನತೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯನ್ನು ಅನುಭವಿಸುತ್ತಿದ್ದರು. ಪ್ರತಿನಿತ್ಯ ಕಚೇರಿಗಳಿಗೆ ಹಲೆದು ಸುಸ್ತಾಗಿ, ಸರ್ಕಾರಿ ಸೌಲಭ್ಯ ಸಿಗದೇ ಸಚಿವರ ಮೊರೆ ಹೋಗಿದ್ದರು. ದೂರುಗಳ ಹಿನ್ನೆಲೆ ಸಚಿವರು ಭೇಟಿ ನೀಡಿ, ಶೀಘ್ರವಾಗಿ ಸಮಸ್ಯೆ ಬಗ್ಗೆ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.