ಮಂಡ್ಯ: ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ವೀರಯೋಧ ಕುರ್ನೆನಹಳ್ಳಿ ಅನಂತ ಅವರು ಹುಟ್ಟೂರಿಗೆ ಆಗಮಿಸಿದಾಗ ಹರಿಹರಪುರ, ಕುರ್ನೆನಹಳ್ಳಿ ಹಾಗೂ ಮಾದ್ದಿಕ್ಯಾ ಚಮನಹಳ್ಳಿ ಗ್ರಾಮಗಳ ನೂರಾರು ಜನರು, ಗ್ರಾಮಗಳ ಯುವ ಜನರು ಹೃದಯಸ್ಪರ್ಶಿಯಾಗಿ ಸ್ವಾಗತಿಸಿ ಗ್ರಾಮಕ್ಕೆ ಬರಮಾಡಿಕೊಂಡರು.
ಅಲಂಕರಿಸಿದ ತೆರೆದ ವಾಹನದಲ್ಲಿ ವೀರಯೋಧ ಕೆ.ಆರ್.ಅನಂತು ಅವರನ್ನು ಗ್ರಾಮದ ರಸ್ತೆಯಲ್ಲಿ ಮೆರವಣಿಗೆ ಮಾಡಿ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು. ಪಟಾಕಿಗನ್ನು ಸಿಡಿಸಿ, ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.
ಗ್ರಾಮದ ಮುಖಂಡರಾದ ನವೀನ್ ಬಲರಾಮೇಗೌಡ, ಶ್ರೀನಿವಾಸ್, ಮೋಹನ್ ಕುಮಾರ್, ಲಕ್ಷ್ಮೀ ಪ್ರಸನ್ನ, ಹರೀಶ್, ಕೃಷ್ಣೆಗೌಡ, ರಾಮೇಗೌಡ ಸೇರಿದಂತೆ ನೂರಾರು ಯುವಕರು ವೀರಯೋಧ ಅನಂತು ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.