ಮಂಡ್ಯ : ಮಂಡ್ಯನಗರದಲ್ಲಿರುವ ಐಐಎಫ್ಎಲ್ ಫೈನಾನ್ಸ್ ಕಂಪನಿಗೆ ಮುತ್ತಿಗೆ ಹಾಕಿ ರೈತರು ಪ್ರತಿಭಟನೆ ನಡೆಸಿದರು. ವೃದ್ಧ ರೈತರೊಬ್ಬರು ಕಂತಿನ ಹಣ ಕಟ್ಟಿಲ್ಲ ಎಂಬ ಕಾರಣಕ್ಕೆ ಮನೆ ಸೀಜ್ ಮಾಡಿ ಹೊರದಬ್ಬಿರುವ ಕಂಪನಿ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದಿಂದ ರೈತರು ಪ್ರೊಟೆಸ್ಟ್ ನಡೆಸಿದರು.
ಮದ್ದೂರಿನ ಬಸವಲಿಂಗನದೊಡ್ಡಿ ಗ್ರಾಮದ ರೈತ ದಾಸೇಗೌಡ ಮನೆ ಮೇಲೆ 5 ಲಕ್ಷ ಸಾಲ ತೆಗೆದುಕೊಂಡಿದ್ದರು. ಕಳೆದ 8 ತಿಂಗಳಿಂದ ಕಂತಿನ ಹಣ ಪಾವತಿಸಿಲ್ಲ ಎಂಬ ಕಾರಣಕ್ಕೆ ಫೈನಾನ್ಸ್ ಕಂಪನಿಯವರು ಮನೆ ಸೀಜ್ ಮಾಡಿದ್ದಾರೆ. ಬ್ಯಾಂಕ್ ವ್ಯವಸ್ಥಾಪಕ ಕಾನೂನು ಅಸ್ತ್ರ ಪ್ರಯೋಗಿಸಿ ಕುಟುಂಬವನ್ನೇ ಮನೆಯಿಂದ ಹೊರಹಾಕಿ ಸೀಜ್ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ವ್ಯವಸ್ಥಾಪಕ ಸಮಸ್ಯೆ ಬಗೆಹರಿಸದೆ ಅನವಶ್ಯಕವಾಗಿ ಮಾತನಾಡಿದ್ದಾರೆ. ಇದರಿಂದ ಬಡ ವೃದ್ದ ಕುಟುಂಬ ಬೀದಿಯಲ್ಲಿಯೇ ಜೀವನ ಕಳೆಯುವಂತಾಗಿದೆ ಎಂದು ಫೈನಾನ್ಸ್ ಕಂಪನಿಯ ವ್ಯವಸ್ಥಾಪಕರ ವಿರುದ್ಧ ಗಂಭೀರ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ದಾಸೇಗೌಡ ಎಂಬುವವರು ಕಳೆದ ಮೂರು ತಿಂಗಳಿನಿಂದ ಕಂತಿನ ಹಣ ಕಟ್ಟಿದ್ದಾರೆ. ಎಂಟು ತಿಂಗಳು ಉಳಿಸಿಕೊಂಡಿದ್ದಾರೆ. ಈ ರೀತಿ ಮಾಡಿ ಮನೆ ಸೀಜ್ ಮಾಡಿ ವೃದ್ಧ ಕುಟುಂಬವನ್ನು ಬೀದಿಗೆ ತಳ್ಳಿರುವುದು ಅಕ್ಷಮ್ಯ ಎಂದು ರೈತ ಮುಖಂಡರು ಆಕ್ರೋಶ ಹೋರಹಾಕಿದರು.