ಮಂಡ್ಯ: ಫೆ.7 ರಂದು ಮಂಡ್ಯ ನಗರ ಬಂದ್ ಮಾಡುವುದಾಗಿ ಸಮಾನ ಮನಸ್ಕರ ವೇದಿಕೆ ಕರೆ ಕೊಟ್ಟಿದೆ. ಸೌಹಾರ್ದ ಮತ್ತು ಶಾಂತಿ ಕದಡುತ್ತಿರುವ ಶಕ್ತಿಗಳ ವಿರುದ್ಧವಾಗಿ ಮಂಡ್ಯ ಜಿಲ್ಲೆಯಲ್ಲಿ ಪ್ರತಿಭಟನೆಗೆ ನಿರ್ಧಾರ ಮಾಡಿದೆ.
ಮನಸ್ಕರ ವೇದಿಕೆ ಸಂಚಾಲಕ ಲಕ್ಷ್ಮಣ್ ಚೀರನಹಳ್ಳಿ ಮಾತನಾಡಿ, ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿಷಯ ಇಟ್ಟುಕೊಂಡು ಶಾಂತಿ ಕದಡುತ್ತಿದ್ದಾರೆ. ರಸ್ತೆಗಳಲ್ಲಿ ಪುಂಡಾಟಿಕೆ ಮಾಡಿ, ಕಲ್ಲು ತೂರಾಟ ಮಾಡಿದ್ದಾರೆ. ಶಾಂತಿ,ಸೌಹಾರ್ದತೆ ಕದಡುತ್ತಿರುವುದನ್ನ ಖಂಡಿಸುತ್ತೇವೆ. ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದು ತಪ್ಪು ಎಂದು ಹೇಳಿದ್ದಾರೆ.
ಬರಪೀಡಿತದ ಬಗ್ಗೆ, ನಿರುದ್ಯೋಗದ ಬಗ್ಗೆ ಹೆಚ್ಚು ಚರ್ಚೆಯಾಗಬೇಕು. ವಿರೋಧ ಪಕ್ಷಗಳು ಮಂಗಳೂರಿನ ರೀತಿ ಮಂಡ್ಯದಲ್ಲಿ ಶಾಂತಿ ಕದಡುತ್ತಿದ್ದಾರೆ. ಸರ್ಕಾರಿ ಜಾಗದಲ್ಲಿ ರಾಷ್ಟ್ರ ಧ್ವಜ ಹಾಕಿದ್ದಾರೆ.
ಹನುಮ ಧ್ವಜ ಹಾಕಿದ್ದಾರೆ, ರೈತರು, ಅಂಬೇಡ್ಕರ್, ಮುಸ್ಲಿಂ, ಕನ್ನಡ ಸಂಘಟನೆಗಳು ಧ್ವಜ ಹಾಕ್ತೇವೆ ಅಂದ್ರೆ ಅಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ರಾಜಕೀಯ ಪಕ್ಷಗಳು ಸರ್ಕಾರದ ವಿರುದ್ದ ಧ್ವಜ ಇಟ್ಟುಕೊಂಡು ಹೋಗ್ತಿರೋದು ಸರಿಯಲ್ಲ. ಇದು ಜನ ವಿರೋಧಿ ಪಾಲಿಟಿಕ್ಸ್. ಪ್ರತಿಭಟನೆ ಹೆಸರಲ್ಲಿ ಗೂಂಡಾಗಿರಿ ಮಾಡ್ತಿದ್ದಾರೆ. ಸಮಾಜದಲ್ಲಿ ಅಶಾಂತಿ ತಲೆದೋರಿದೆ. ಸಿಟಿ ರವಿ ರಾಷ್ಟ್ರ ಧ್ವಜವನ್ನು ತಾಲಿಬಾನ್ ಗೆ ವಹಿಸಿದ್ದಾರೆ. ಕೋಮುವಾದಿ ವಿರೋಧ ವ್ಯಕ್ತಪಡಿಸಿಬೇಕು ಎಂದು ಹೇಳಿದ್ದಾರೆ.
ಬಳಿಕ ಮಾತು ಮುಂದುವರಿಸಿದ ಅವರು, ಬಿಜೆಪಿ-ಜೆಡಿಎಸ್ ಫೆ. 9 ರಂದು ಕರೆ ಕೊಟ್ಟಿದ್ದಾರೆ. ಇದು ಒಳ್ಳೆಯ ಬಂದ್ ಅಲ್ಲ. ಇದನ್ನು ನಿಲ್ಲಿಸಲು ಪೆ.7 ರಂದು ಮಂಡ್ಯ ಬಂದ್ ಕರೆ ಕೊಟ್ಟಿದ್ದೇವೆ. ಅನುಮತಿ ಪಡೆಯದೆ ಹನುಮ ಧ್ವಜ ಹಾಕಿರುವುದು ತಪ್ಪು. ಶಾಂತಿ ಕದಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಆಗ್ರಹ. ಮಂಡ್ಯ ಜಿಲ್ಲೆ ಮಂಗಳೂರು ಆಗಬಾರದು ಅಂತ ಹೇಳಿ ಪುಂಡಾಟಿಕೆ ನಿಲ್ಲಿಸಲು ಬಂದ್ ಮಾಡುತ್ತಿದ್ದೇವೆ. ಮಂಡ್ಯ ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕು ಎಂದು ಲಕ್ಷ್ಮಣ್ ಚೀರನಹಳ್ಳಿ ಹೇಳಿದ್ದಾರೆ.