ಮಂಡ್ಯ : ಮಂಡ್ಯದ ಮೈಶುಗರ್ ಮೈದಾನದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಸಮಾವೇಶ ನಡೆಯಿತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗ್ಯಾರಂಟಿ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.
ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಗಣಿಗ ರವಿಕುಮಾರ್ ಅವರು, ಮಹಿಳೆಯರನ್ನ ಸಬಲೀಕರಣ ಮಾಡೋದು ನಮ್ಮ ಗುರಿಯಾಗಿದೆ. ಐದು ಗ್ಯಾರಂಟಿಗಳ ಸೌಲಭ್ಯ ಜನರಿಗೆ ತಲುಪುತ್ತಿದೆ. ಮಹಿಳೆಯರಿಗಾಗಿ ಬಸರಾಳುವಿನಲ್ಲಿ ಗಾರ್ಮೆಂಟ್ಸ್ ನಿರ್ಮಾಣ ಮಾಡಿ ಅವರಿಗೆ ಉದ್ಯೋಗ ಕೊಡಬೇಕು. ಮುಂದಿನ ದಿನಗಳಲ್ಲಿ ಒಳ್ಳೆಯ ಗಾರ್ಮೆಂಟ್ಸ್ ನಿರ್ಮಾಣದ ಮಾಡುವ ಗುರಿ ಇದೆ. ಮೈಶುಗರ್ ಕಾರ್ಖಾನೆಯನ್ನ ಹೊಸ ಕಾರ್ಖಾನೆಯಲ್ಲಿಯೇ ನಿಮ್ಮ ಮಕ್ಕಳಿಗೆ ಸಾಫ್ಟ್ವೇರ್ ಕೆಲಸ ಸಿಗುತ್ತೆ ಎಂದರು.
ಕೊಲೆಗಡುಕರಿಂದ ರಾಮನ, ಹನುಮಂತನ ಭಕ್ತಿ ಹೇಳು ಕೊಡಬೇಕಿಲ್ಲ. ನಿಮ್ಮ ಊರಿನ ಅಭಿವೃದ್ಧಿ ಮಾಡುವುದು ನಮ್ಮ ಗುರಿಯಾಗಿದೆ. ಏನು ಕೆಲಸ ಮಾಡದ ರಾಜಕಾರಣಿಗಳ ಕಣ್ಣು ಕೆಂಪು ಹಾಗ್ತಿದೆ. ಅವರಿಗೆ ಸುಮ್ಮನೆ ಕೂರಲು ಹಾಗ್ಯಿಲ್ಲ ಎಂದು ವಾಗ್ದಾಳಿ ನಡೆಸಿದರು. ಮಂಡ್ಯ 33 ಕೋಟಿ ರೂ. ನಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತೆ. ಎಲ್ಲಾ ರಸ್ತೆಗಳನ್ನ ಡಾಂಬರಿಕರಣ ಮಾಡ್ತೇವೆ ಎಂದು ಶಾಸಕ ಗಣಿಗ ರವಿಕುಮಾರ್ ಹೇಳಿದರು.