ಸಂಕ್ರಾತಿ ಹಬ್ಬದ ಪ್ರಯುಕ್ತ, ಶ್ರೀ ಸಿದ್ದೇಶ್ವರ ಜಾನುವಾರುಗಳ ಜಾತ್ರೆಯಲ್ಲಿ ಬರಗಾಲದಿಂದ ಕಂಗೆಟ್ಟ ರೈತರಿಗೆ ಉತ್ಸಾಹ ತುಂಬಲು ಶ್ರೀ ತುಳಸಿಗಿರೀಶ ಫೌಂಡೇಶನ್ ವತಿಯಿಂದ ನೃತ್ಯ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಾಡಿನ ಹೆಸರಾಂತ ಕಲಾವಿದ ಸರಿಗಮಪ ಖ್ಯಾತಿಯ ಹಣಮಂತ,ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ದಂಪತಿ,ಗಾಯಕ ಪುಂಡಲೀಕ ಹನಾಪುರ ತಮ್ಮ ಪ್ರತಿಭೆಯ ಮೂಲಕ ಪ್ರೇಕ್ಷಕರನ್ನು ಮನರಂಜಸಿದರು.
ಕಾರ್ಯಕ್ರಮವನ್ನು ಶ್ರೀ ಗೋಪಾಲ್ ಮಹಾರಾಜರು ಉದ್ಘಾಟಿಸಿದರು. ರಾಜೋತ್ಸವ ಪ್ರಶಸ್ತಿ ವಿಜೇತ ಆರ್ ಬಿ ನಾಯಿಕ್,ಪ್ರಕಾಶ್ ನಾಯಿಕ್,ಸುರೇಶ್ ಬಿಜಾಪುರ,ಮೋಹನ್ ಚವಾಣ್,ರಾಕೇಶ್ ರಜಪೂತ್,ರವಿ ರಾಥೋಡ್,ಸುನಿಲ ನಾಯಿಕ ಮಹಾನಗರ ಪಾಲಿಕೆಯ ಸದಸ್ಯರು ಶ್ರೀ ರಾಹುಲ ಜಾಧವ ಹಾಗೂ ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಯುವಕರು ಮತ್ತು ಕಾರ್ಯಕ್ರಮದಲ್ಲಿ ಪ್ರಮುಖರು, ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.