ಮಡಿಕೇರಿ: ಮಡಿಕೇರಿ ನಗರದ ಹೃದಯ ಭಾಗವಾದ ಜನರಲ್ ತಿಮ್ಮಯ್ಯ ವೃತ್ತದಲ್ಲಿದ್ದ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪ್ರತಿಮೆಗೆ ಆಗಸ್ಟ್, 21 ರಂದು ksrtc ಬಸ್ ಡಿಕ್ಕಿ ಹೊಡೆದ ಪರಿಣಾಮ ಪ್ರತಿಮೆ ಮತ್ತು ಪ್ರತಿಮೆ ನಿಂತಿದ್ದ ವೃತ್ತಕ್ಕೆ ಹಾನಿಯುಂಟಾಗಿತ್ತು.ಈ ಹಾನಿಗೊಳಗಾದ ಪ್ರತಿಮೆಯನ್ನು ಮೈಸೂರಿನ ಶಿಲ್ಪಕಲಾ ಅಕಾಡೆಮಿಗೆ ರವಾನಿಸಿ ಪ್ರತಿಯನ್ನು ದುರಸ್ತಿಗೊಳಿಸಲು ಹಾಗೆಯೇ ಹಾನಿಗೊಳಗಾಗಿದ್ದ ವೃತ್ತವನ್ನೂ ಸಹ ದುರಸ್ತಿಗೊಳಿಸಲು ಕೆಆರ್‍ಐಡಿಎಲ್ ಸಂಸ್ಥೆಯಿಂದ ಕ್ರಮ ವಹಿಸಲಾಗಿತ್ತು.
ಸದ್ಯ ಪ್ರಸ್ತುತ ಹಾನಿಗೊಳಗಾದ ಪ್ರತಿಮೆ ಮತ್ತು ಪ್ರತಿಷ್ಠಾಪನಾ ವೃತ್ತವು ಸಹ ದುರಸ್ತಿಯಾಗಿ ಪುನರ್ ಸ್ಥಾಪನೆಗೆ ಸಿದ್ದವಾಗಿರುತ್ತದೆ. ಈ ಕಾರ್ಯವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು, ನಗರಸಭೆ, ಕೆಎಸ್‍ಆರ್‍ಟಿಸಿ ಮತ್ತು ಕೊಡವ ಸಮಾಜದ ಸಹಕಾರದೊಂದಿಗೆ ನಿರ್ವಹಿಸಲಾಗಿದೆ.ಈ ಹಿನ್ನೆಲೆಯಲ್ಲಿ ಮಾರ್ಚ್, 08 ರಂದು ಇಂದು ಮಧ್ಯಾಹ್ನ 12 ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕೊಡಗು ಜಿಲ್ಲೆಯ ವೀರ ಸೇನಾನಿ, ಪದ್ಮ ಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪ್ರತಿಮೆಯ ಪುನರ್ ಸ್ಥಾಪನೆ ಕಾರ್ಯಕ್ರಮವನ್ನು ಮಾಜಿ ಮಂತ್ರಿಗಳಾದ ಎಂ.ಸಿ.ನಾಣಯ್ಯ ಅವರ ಮುಂದಾಳತ್ವದಲ್ಲಿ ನಡೆಯಿತು.