ಸುದ್ದಿ

ಮಧ್ಯಪ್ರದೇಶ ಹಾಲಿ ಸಂಸದರಿಗೆ ಕೊಕ್ !ಹೊಸ ಮುಖಗಳಿಗೆ ಮಣೆ

ಮಧ್ಯಪ್ರದೇಶದಲ್ಲಿ ಬಿಜೆಪಿ ಸಖತ್ ಆಕ್ಟಿವ್ ಆಗಿದೆ, ಭಾರೀ ಬದಲಾವಣೆಗೆ ಬಿಜೆಪಿ ಮುಂದಾಗಿದ್ದು, ಹಿಂದುತ್ವ ಸಂಘಟನೆಗಳ ಪಾಲಿನ ಸಿಂಹಿಣಿ , ಭೋಪಾಲ್ ಹಾಲಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ಅವರಿಗೆ ಟಿಕೆಟ್ ನೀಡದೆ ಇರಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

2024ರ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು , ಇನ್ನೇನು ಕೆಲವೇ ವಾರಗಳಲ್ಲಿ ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಿಸಲಿದೆ. ಈಗಾಗ್ಲೇ ಬಹುತೇಕ ಎಲ್ಲಾ ಪಕ್ಷಗಳು ಚುನಾವಣಾ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದೆ. ಈ ಬಾರಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ತನ್ನ ಕೆಲ ಅಭ್ಯರ್ಥಿಗಳನ್ನ ಬದಲಾಯಿಸುವ ಯೋಚನೆ ಮಾಡಿದೆ.

ಈ ಹಿನ್ನೆಲೆ ಮಧ್ಯಪ್ರದೇಶದಲ್ಲಿ ಭಾರೀ ಬದಲಾವಣೆಗೆ ಬಿಜೆಪಿ ಮುಂದಾಗಿದ್ದು, ಹಿಂದುತ್ವದ ಫೈರ್‌ ಬ್ರ್ಯಾಂಡ್, ಭೋಪಾಲ್ ಹಾಲಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಬದಲಾಯಿಸಲು ಚಿಂತನೆ ನಡೆದಿದೆ.
ಸದ್ಯ ಭೋಪಾಲ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಪ್ರಜ್ಞಾ ಠಾಕೂರ್ ಅವರನ್ನು ಈ ಬಾರಿ ಕೈ ಬಿಟ್ಟು ಆ ಕ್ಷೇತ್ರಕ್ಕೆ ಹೊಸ ಮುಖವನ್ನ ಕಣಕ್ಕಿಳಿಸಲು ಪಕ್ಷ ಮುಂದಾಗಿದೆ.

ಭೋಪಾಲ್‌ ಕ್ಷೇತ್ರಕ್ಕೆ ಹೊಸ ಮುಖ ಯಾರು?
ಭೋಪಾಲ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಾಲಿ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್ ಅವರನ್ನ ಬದಲಾಯಿಸಿ ಆ ಜಾಗಕ್ಕೆ ಬರುವ ಹೊಸ ಮುಖಗಳ ಪೈಕಿ ಅನೇಕರು ಆಕಾಂಕ್ಷಿಗಳಿದ್ದು , ಪ್ರಜ್ಞಾ ಸಿಂಗ್‌ ಠಾಕೂರ್‌ಗೆ ಟಿಕೆಟ್ ಇಲ್ಲ ಎಂಬ ಸುದ್ದಿ ಹರಡುತ್ತಿದ್ದಂತೆ ಅನೇಕ ಮಂದಿ ಲೋಕಸಭಾ ಟಿಕೆಟ್‌ಗಾಗಿ ಟವೆಲ್ ಹಾಕಿದ್ದಾರೆ. ಆದರೆ ಬಿಜೆಪಿ ಇನ್ನೂ ಯಾರನ್ನೂ ಫೈನಲ್ ಮಾಡಿಲ್ಲ
ಮಧ್ಯಪ್ರದೇಶದ ಭೋಪಾಲ್ ಮಾತ್ರವಲ್ಲದೇ,ಅಲ್ಲಿನ ಅನೇಕ ಕ್ಷೇತ್ರಗಳ ಕೆಲ ಹಾಲಿಸಂಸದರಿಗೂ ಟಿಕೆಟ್ ನಿರಾಕರಿಸುವ ಸಂಭವವಿದೆ ಎಂದು ಹೇಳಲಾಗುತ್ತಿದೆ .

Comments (0)

Your email address will not be published. Required fields are marked *

Back to top button