Wednesday, April 30, 2025
34.5 C
Bengaluru
LIVE
ಮನೆರಾಜಕೀಯಲೋಕಸಭಾ ಅಭ್ಯರ್ಥಿಗಳ ಪಟ್ಟಿಯಿಂದ ಕರ್ನಾಟಕದಲ್ಲಿ ಭಿನ್ನಮತ ಭುಗಿಲೇಳುತ್ತಾ?

ಲೋಕಸಭಾ ಅಭ್ಯರ್ಥಿಗಳ ಪಟ್ಟಿಯಿಂದ ಕರ್ನಾಟಕದಲ್ಲಿ ಭಿನ್ನಮತ ಭುಗಿಲೇಳುತ್ತಾ?

ಬಿಜೆಪಿ ಪಕ್ಷ ಈ ಬಾರಿಯ ಲೋಕಾ ಸಮರಕ್ಕೆ ದೇಶದಾದ್ಯಂತ ಸಕಲ ಸಿದ್ದತೆ ಮಾಡಿಕೊಂಡಿದೆ. ಅದು ಕಣಕ್ಕೆ ಇಳಿಸಬೇಕಾದ ತನ್ನ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಅಂತಿಮ ತಾಲೀಮು ಮಾಡಿಕೊಂಡಿದೆ. ಶನಿವಾರ ದೆಹಲಿಯಿಂದ ದೇಶದ ವಿವಿಧ ರಾಜ್ಯಗಳಲ್ಲಿ ಚುನಾವಣೆಗೆ ನಿಲ್ಲಬೇಕಾದ 195 ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಗೊಳಿಸಿಕೊಂಡು, ಪ್ರಕಟಣೆ  ಸಹ ನೀಡಿದೆ. ಆದರೆ, ಇದರಲ್ಲಿ  ದಕ್ಷಿಣ ಭಾರತದ ಹೆಬ್ಬಾಗಿಲು ಎನ್ನಲಾಗುವ ಹಾಗೂ ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟ ಕರ್ನಾಟದ ರಾಜ್ಯದ ಒಬ್ಬೇ ಒಬ್ಬ ಅಭ್ಯರ್ಥಿಗಳ ಹೆಸರು ಸಹ ಇಲ್ಲದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಕೇಂದ್ರದ ನಾಯಕತ್ವ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ವೇಳೆ ಕರ್ನಾಟಕದ ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಡೆಗಣಿಸಿದ್ದೇಕೆ? ಕಳೆದ ಬಾರಿ ಚುನಾವಣೆಗೆ ನಿಂತಿದ್ದ ಅಭ್ಯರ್ಥಿಗಳನ್ನು ಈ ಬಾರಿ ಕೈ ಬಿಡಲಿದೆಯೇ?  ಅಥವಾ ಭಿನ್ನಮತ ಭೀತಿ ಕಾಡುತ್ತಿದೆಯೇ? ಅಥವಾ ಮೈತ್ರಿ  ಗೊಂದಲ, ಸೀಟು ಹೊಂದಾಣಿಕೆ ಸಮಸ್ಯೆ  ಕಾರಣವೇ? ಎನ್ನುವುದು ಗೊತ್ತಾಗಿಲ್ಲ. ಆದರೆ, ಈ ಬಗ್ಗೆ ಸಾಕಷ್ಟು ಗುಸು ಗುಸು ಚರ್ಚೆ ಶುರುವಾಗಿರೋದು ಸುಳ್ಳಲ್ಲ.

ಇನ್ನೊಂದೆಡೆ, ಲೋಕ ಸಮರದಲ್ಲಿ ಬಿಜೆಪಿ ರಾಜ್ಯದಲ್ಲಿ ಈ ಬಾರಿ ಹೊಚ್ಚ ಹೊಸ ಮುಖಗಳಿಗೆ ಮಣೆ ಹಾಕಲಿದೆ ಎನ್ನಲಾಗಿದೆ. ಈ ಬಾರಿಯ ವಿಧಾನಸಭೆಯ ಚುನಾವಣೆಯ ವೇಳೆ ಇಂತಹ ಪ್ರಯೋಗವನ್ನು ಬಿಜೆಪಿ ಮಾಡಿದೆ. ಆದರೆ, ಅದರಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಆದರೆ, ಇದು ಸಾಕಷ್ಟು ಭಿನ್ನಮತಕ್ಕೆ ಕಾರಣವಾಗಿತ್ತು. ಈ ಭಿನ್ನಮತದ ಪರಿಣಾಮವಾಗಿ ಬಿಜೆಪಿ ಚುನಾವಣೆಯಲ್ಲಿ ಮುಗ್ಗುರಿಸುವಂತಾಗಿತ್ತು. ಇದರಿಂದಾಗಿ ಬಿಜೆಪಿ  ಅಳೆದು ತೂಗಿ ಹೆಜ್ಜೆ ಇಡುತ್ತಿದೆ ಎಂದು ಹೇಳಲಾಗಿದೆ. ಲೋಕ ಸಮರ ಸೇನಾನಿಗಳ

ಮತ್ತೊಂದೆಡೆ, ಬಿಜೆಪಿಯಲ್ಲಿ ಇರುವ ಗೊಂದಲಗಳು, ವಿವಿಧ ಗುಂಪುಗಳು, ಮುಖಂಡರಲ್ಲಿನ ಭಿನ್ನಮತ ಸಹ ಕರ್ನಾಟಕದ ಅಭ್ಯರ್ಥಿಗಳನ್ನು  ಮೊದಲ ಪಟ್ಟಿಯಲ್ಲಿ ಕಡೆಗಣಿಸಿರುವುದಕ್ಕೆ ಕಾರಣ ಎಂಬುದು ಹಲವು ಮುಖಂಡರ ಚರ್ಚೆಯಲ್ಲಿ ಕೇಳಿ ಬರುತ್ತಿದೆ. ಇದು ಸದ್ಯ ತೇಪೆ ಹಾಕಿ ಶಮನಗೊಳಿಸಲಾಗಿರುವ, ಕರ್ನಾಟಕ ಬಿಜೆಪಿಯ ಬಂಡಾಯವನ್ನು ಮತ್ತೆ ಹೆಚ್ಚಿಸಬಹುದು ಎಂಬ  ಆತಂಕ ಸೃಷ್ಠಿಸಿದೆ ಎನ್ನಲಾಗ್ತಿದೆ.

ಬಿಜೆಪಿ ಪಕ್ಷದಲ್ಲಿನ ಇಂತಹ ಆತಂಕದ ಮಧ್ಯದಲ್ಲಿ ಕ್ಷೇತ್ರದ ವಿಂಗಡಣೆyಇಂದ ಉಂಟಾಗಿರುವ ಗೊಂದಲ, ಮಂಗಳೂರು ಕ್ಷೇತ್ರ ಸೇರಿದಂತೆ ಕೆಲ ಕ್ಷೇತ್ರ ವಿಂಗಡಣೆಯಿಂದ ತಲೆದೋರಿರುವ ಸಮಸ್ಯೆಗಳಿಂದ ಸಹ ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಳಂಬ ಉಂಟಾಗಿದೆ ಎಂದು ಸಹ ಕೇಳಿಬರುತ್ತಿದೆ.

ಆದರೆ, ಇದೆಲ್ಲಕ್ಕಿಂತ ಹೆಚ್ಚಾಗಿ ಅಭ್ಯರ್ಥಿಗಳ  ಆಯ್ಕೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮಧ್ಯ ಉಂಟಾಗಿರುವ ಹೊಂದಾಣಿಕೆ ಸಹ ಪ್ರಮುಖ ಪಾತ್ರ ವಹಿಸಿದೆ. ಜೆಡಿಎಸ್ ಹಾಗೂ ಬಿಜೆಪಿ ಮಧ್ಯ ಸೀಟು ಹೊಂದಾಣಿಕೆ ಇನ್ನೂ ಅಂತಿಮಗೊಂಡಿಲ್ಲ. ಈ ಮಧ್ಯ ಮಂಡ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ, ಜೆ.ಡಿ.ಎಸ್ ನಲ್ಲಿ ಇರುವ  ಬಿಗಿಪಟ್ಟು ಕಂಡು ಬುರತ್ತಿದೆ.  ಒಟ್ಟಾರೆಯಾಗಿ, ಬಿಜೆಪಿ ರಾಷ್ಟ್ರೀಯ ನಾಯಕರು  ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸದಿರುವುದು, ಕರ್ನಾಟಕದಿಂದ ಕಳುಹಿಸಲಾಗಿರುವ ಪಟ್ಟಿಯನ್ನು ಕಡೆಗಣಿಸಿರುವುದು ರಾಜ್ಯದಲ್ಲಿ ನಾನಾ ಗೊಂದಲ ಸೃಷ್ಠಿಸಿದೆ. ಲೋಕಾ ಸಮರಕ್ಕೆ ಸ್ಪರ್ಧಿಸುವ ಉತ್ಸಾಹದಲ್ಲಿದ್ದ ಹಲವರ ಎದೆಯಲ್ಲಿ ಡವ ಡವಕ್ಕೆ ಕಾರಣವಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments