ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರೊ. ಶಿರಗಾನಹಳ್ಳಿ ಶಾಂತಾನಾಯ್ಕ್ ಅವರನ್ನು ಕೆಪಿಎಸ್ಸಿಗೆ ನೇಮಿಸಬಾರದು ಎಂದು ಕಾಂಗ್ರೆಸ್ ಮುಖಂಡರೊಬ್ಬರು ಪತ್ರ ಬರೆದಿದ್ದಾರೆ. ಶಾಂತಾನಾಯ್ಕ್ ಅವರು ಮತ್ತು ಅವರ ಕುಟುಂಬ ಬಿಜೆಪಿಗರಾಗಿದ್ದು, ಇವರನ್ನು ಕೆಪಿಎಸ್ಸಿಗೆ ನೇಮಕ ಮಾಡುವುದು ಸರಿಯಲ್ಲ ಎಂದು ಹರಪನಹಳ್ಳಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎನ್.ಕೊಟ್ರೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಪ್ರೊ. ಶಾಂತನಾಯ್ಕ್ ಅವರನ್ನು ಕೆಪಿಎಸ್ಸಿ ಸದಸ್ಯರಾಗಿ ನೇಮಿಸಲು ಮುಂದಾಗಿರುವುದು ನನ್ನ ಗಮನಕ್ಕೆ ಬಂದಿದೆ ಇವರು ಮೂಲತಃ ಬಿಜೆಪಿ ಪಕ್ಷದವರಾಗಿದ್ದಾರೆ. ಇವರ ಕುಟುಂಬ ನನ್ನ ವಿರುದ್ದ ಪ್ರಚಾರ ಮಾಡಿ ನನ್ನ ಸೋಲಿಗೆ ಕಾರಣವಾಗಿದೆ. ಅಸಂಬ್ಲಿ, ಲೋಕಸಭೆ ಚುನಾವಣೆಯಲ್ಲಿ ಹಾಗೂ ತಾಲೂಕು ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ನಮ್ಮ ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ.
ಇವರ ಬಿಜೆಪಿ ಹಿನ್ನೆಲೆಯಿಂದಾಗಿಯೇ ಇವರನ್ನು ಬಿಜೆಪಿ ಸರ್ಕಾರ ಕೇಂದ್ರ ಸಾಹಿತ್ಯ ಆಕಾಡೆಮಿ ಸದಸ್ಯರಾನ್ನಾಗಿ ಮಾಡಿದೆ. ಇವರನ್ನು ಕೆಪಿಎಸ್ಸಿ ಮೇಂಬರ್ ಮಾಡಿದರೆ, ಸ್ಥಳೀಯ ಕಾರ್ಯಕರ್ತರಿಗೆ ಹಾಗೂ ಪಕ್ಷಕ್ಕೆ ಮುಜುಗರವಾಗುತ್ತದೆ. ಹಾಗಾಗಿ ಶಾಂತಾನಾಯ್ಕ್ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ಪರಿಗಣಿಸಬಾರದು ಎಂದು ಅವರು ಮುಖ್ಯಮಂತ್ರಿ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.