ಕೊಪ್ಪಳ : ಐತಿಹಾಸಿಕ ಶ್ರೀ ಮುರಡಬಸವೇಶ್ವರ ಮಹಾ ರಥೋತ್ಸವ ಇಂದು ಕೊಪ್ಪಳದ ಕಾರಟಗಿ ತಾಲೂಕಿನ ಯರಡೋಣ ಗ್ರಾಮದಲ್ಲಿ ಅದ್ದೂರಿ ರಥೋತ್ಸವ ನೆರವೇರಿತು.
ಸಾವಿರಾರು ಭಕ್ತುರ ಸಮ್ಮುಖದಲ್ಲಿ ಡೊಳ್ಳು, ಸಕಲ ವಾದ್ಯಗಳೊಂದಿಗೆ ಅದ್ಧೂರಿ ರಥೋತ್ಸವ ಜರುಗಿತು. ಭಕ್ತಾಧಿಗಳು ರಥಕ್ಕೆ ಬಾಳೆ ಹಣ್ಣು, ಹೂವು ಎಸೆದು ದೇವರಿಗೆ ಸಮರ್ಪಿಸಿದರು. ರಥೋತ್ಸವದಲ್ಲಿ ಕಾರಟಗಿ ಹಾಗೂ ತಾಲೂಕಿನ ಸುತ್ತಮುತ್ತಲಿನ ಗ್ರಾಮದ ಜನರು ಭಾಗಿಯಾಗಿದ್ರು. ಈ ವೇಳೆ ಆರ್ಸಿಬಿ, ಆರ್ಸಿಬಿ ಎಂದು ಆರ್ಸಿಬಿ ಫ್ಯಾನ್ಸ್ ಕೂಗಿ ಕುಣಿದು ಕುಪ್ಪಳಿಸಿದರು.