ಕೊಪ್ಪಳ : ಇತ್ತಿಚಗಷ್ಟೆ ಮೋದಿ ಎನ್ನುವವರಿಗೆ ಕಪಾಳಕ್ಕೆ ಹೊಡಿರಿ ಎಂದು ಸಚಿವ ತಂಗಡಗಿ ಹೇಳಿದ್ರು. ಇದು ರಾಜ್ಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿತ್ತು. ತಂಗಡಗಿ ಹೇಳಿಕೆಯನ್ನೆ ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಅಸ್ತ್ರವನ್ನಾಗಿಸಿಕೊಂಡಿದ್ರು. ಬಿಜೆಪಿ ಕಳೆದ ಎರಡ್ಮೂರು ದಿನದಿಂದ ರಾಜ್ಯದಂತ ತಂಗಡಗಿ ವಿರುದ್ಧ ಹೋರಾಟ ಮಾಡಿದ್ಲೇ ಬಿಜೆಪಿ ಕಾರ್ಯಕರ್ತರು ಕಾರಟಗಿಯಲ್ಲಿಯ ತಂಗಡಗಿ ನಿವಾಸಕ್ಕೂ ಮುತ್ತಿಗೆ ಹಾಕಲು ಮುಂದಾಗಿದ್ರು. ಇದೀಗ ಬಿಜೆಪಿ ಕಾರ್ಯಕರ್ತರ ನೆಡೆಗೆ ತಂಗಡಗಿ ಬೆಂಬಲಿಗರು ಆಕ್ರೋಶ ಹೊರಹಾಕ್ತಿದ್ದಾರೆ.
I STAND WITH TANGADAGI ಎಂಬ ಅಭಿಯಾನವನ್ನ ತಂಗಡಗಿ ಅಭಿಮಾನಿಗಳು ಆರಂಭಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತ ಹಾಗೂ ಹಿಂದುಳಿದ ಇಲಾಖೆ ಸಚಿವ ಶಿವರಾಜ ತಂಗಡಗಿ ಪರವಾಗಿ ಕ್ಷೇತ್ರದಲ್ಲಿ ಬೃಹತ್ ಅಭಿಯಾನ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಂಗಡಗಿ ಪರ ಅಭಿಯಾನ ಆರಂಭವಾಗಿದ್ದು, ನಾನು ತಂಗಡಗಿಯೊಂದಿಗಿದ್ದೆನೆ, I STAND WITH TANGADGI ಎಂಬ ಪೊಸ್ಟರ್ ಮೂಲಕ ಅಭಿಯಾನ ಶುರುವಾಗಿದೆ.
ಮೋದಿ ಎಂದರೆ ನಿಮ್ಮ ಹೊಟ್ಟೆ ತುಂಬುವುದಿಲ್ಲ, ಬದುಕು ಉದ್ದಾರ ಆಗಯವುದಿಲ್ಲ, ಆತ್ಮ ಸಾಕ್ಷಿಯಿಂದ ನೆಡೆಯಿರಿ, ಕುಟುಂಬದ ಘನತೆಗಾಗಿ, ಸ್ವಾವಲಂಬಿ ಬದುಕಿನ ಹಕ್ಕಿಗಾಗಿ ಉದ್ಯೋಗ ಕೇಳಿ, ನಿಮ್ಮೊಂದಿಗೆ ನಾವು ಬರುತ್ತವೆ ಎಂದು ಅಭಿಯಾನದ ಪೊಸ್ಟರ್ ನಲ್ಲಿ ಬರೆದು ಬಿಜೆಪಿ ವಿರುದ್ಧ ತಂಗಡಗಿ ಬೆಂಬಲಿಗರು ಸಿಡಿದೆದಿದ್ದಾರೆ.