ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ್ಗೆ ಬಂಡಾಯದ ಬಿಸಿ ತಟ್ಟಿದೆ. ಹಾಲಿ ಸಂಸದರಾಗಿದ್ದ ಸಂಗಣ್ಣ ಕರಡಿಯವರಿಂದ ಬಂಡಾಯ ಎದುರಿಸುವಂತಾಗಿದೆ. ತಮಗೆ ಲೋಕಸಭೆ ಟಿಕೆಟ್ ಸಿಗದ ಕಾರಣ ಸಂಗಣ್ಣ ಕರಡಿ ಪಕ್ಷದ ನಾಯಕರ ವಿರುದ್ದ ಬಂಡಾಯವೆದ್ದಿದಾರೆ. ಸಂಗಣ್ಣ ಕರಡಿ ನಾಳೆ ತಮ್ಮ ಅಭಿಮಾನಿಗಳ ಪ್ರತ್ಯೇಕ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ತಮ್ಮ ಬೆಂಬಲಿಗರ ಅಭಿಪ್ರಾಯ ಪರಿಶೀಲಿಸಿದ ನಂತರ, ತಮ್ಮ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ.
ಈ ರೀತಿಯಲ್ಲಿ ಸಂಗಣ್ಣ ಕರಡಿಯವರ ಬಂಡಾಯದಿಂದಾಗಿ ಬಿಜೆಪಿ ಅಭ್ಯರ್ಥಿ ಡಾ: ಬಸವರಾಜ್ಗೆ ದೊಡ್ಡ ಮಟ್ಟದ ಕಾರ್ಯಕರ್ತರ ಕೊರತೆ ಕಾಡುತ್ತಿದೆಯಲ್ಲದೇ, ಸೋಲಿನ ಭೀತಿ ಎದುರಿಸುವಂತಾಗಿದೆ. ಈ ನಡುವೆ ಪಕ್ಷದ ಮುಖಂಡರಾದ ಯಡಿಯೂರಪ್ಪ ಇನ್ನಿತರರು ಸಂಗಣ್ಣ ಕರಡಿಯವರಿಗೆ ಪ್ರೆಸ್ಮೀಟ್ ಮಾಡದಂತೆ, ಬಂಡಾಯ ವ್ಯಕ್ತಪಡಿಸದಂತೆ, ಆದಷ್ಟು ಬೇಗ ಸಮಸ್ಯೆ ಪರಿಹರಿಸುವ ಬಗ್ಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಆದರೆ, ಕೊಪ್ಪಳದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಲ್ಲಿ ಮಾತ್ರ ಕರಡಿ ಬಂಡಾಯದಿಂದಾಗಿ ಭಾರೀ ಗೊಂದಲ ಉಂಟಾಗಿದೆ..