ಕೊಪ್ಪಳ : ಕೊಪ್ಪಳ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಟಿಕೇಟ್ ಯಾರಿಗೆ ಕೊಟ್ಟರು ನಾವು ಪಕ್ಷಕ್ಕೆ ಕೆಲಸ ಮಾಡುತ್ತೇವೆ. ನನಗೂ ಟಿಕೇಟ್ ಸಿಗುತ್ತೆ ಎನ್ನುವ ಭರವಸೆ ಕೂಡ ಇದೆ. ಕೊಪ್ಪಳದಲ್ಲಿ ಸಂಸದ ಸಂಗಣ್ಣ ಮಾತನಾಡಿದ್ದಾರೆ.ಟಿಕೇಟ್ ಯಾರಿಗೆ ಕೊಡ್ತಾರೆ ಅನ್ನೋದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು. ಹೊಸಬರಿಗೆ ಟಿಕೇಟ್ ಕೊಟ್ಟರು ನಮಗೆ ಖುಷಿ. ಬಿಜೆಪಿ ಪಕ್ಷಕ್ಕಾಗಿ ನಾವು ಕೆಲಸ ಮಾಡುತ್ತೇವೆ. ಹಳಬರನ್ನ ಕೈ ಬಿಡೋದು ತೆಗೆದುಕೊಳ್ಳುವದು ವರಿಷ್ಠರಿಗೆ ಬಿಟ್ಟ ವಿಷಯ ಎಂದು ಹೇಳಿದರು.
ಕೊಪ್ಪಳಕ್ಕೆ ಯಾರನ್ನೇ ಹಾಕಿದರು ನಾವು ವೆಲ್ ಕಾಮ್ ಮಾಡುತ್ತೇವೆ. ನನಗೂ ಟಿಕೇಟ್ ಸಿಗುತ್ತೆ ಅನ್ನುವ ಭರವಸೆ ಕೂಡ ಇದೆ. ಮತ್ತೊಮ್ಮೆ ನಮಗೆ ಅವಕಾಶ ಕೊಡಿ ಎಂದು ಹಿರಿಯರನ್ನ ಭೇಟಿ ಮಾಡಿದ್ದೇವೆ. ನಮಗೂ ಅವರು ಭರವಸೆಯನ್ನು ನೀಡಿದ್ದಾರೆ ಕಾದು ನೋಡಬೇಕಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.