ರಾಜ್ಯಸುದ್ದಿ

ಅಗ್ನಿಗೆ 5 ಬಣವಿಗಳು ಆಹುತಿ, ರೈತರಿಗೆ ಪರಿಹಾರ ನೀಡುವುದೇ ಸರಕಾರ

ಕೊಪ್ಪಳ : ಮೇವಿನ ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮವಾಗಿ ಐದು ಬಣವೆಗಳು ಬೆಂಕಿಗಾಹುತಿಯಾದ ಘಟನೆ ಕೊಪ್ಪಳ ಜಿಲ್ಲೆಯ ಇಂದರಗಿಯಲ್ಲಿ ಜರುಗಿದೆ.

ಆರಂಭದಲ್ಲಿ ಒಂದು ಬಣವಿಗೆ ಆಕಸ್ಮಿಕ ಬೆಂಕಿ ತಗುಲಿತ್ತು. ನಂತರ ಇದು ಸುತ್ತಲಿನ ಹಲವು ಬಣವಿಗಳಿಗೆ ವ್ಯಾಪಿಸಿದೆ. ಇದರಿಂದಾಗಿ, ಐದು ಬಣವಿಗಳಿಗೂ ತಗುಲಿದ ಬೆಂಕಿ ಹೊತ್ತಿಕೊಂಡು ಅಗ್ನಿಗೆ ಆಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಅಋಏ. ಅಗ್ನಿಶಾಮಕ ದಳದ ಸಿಬ್ಬಂದಿ ಈ ಕಾರ್ಯದಿಂದ ಸಾಕಷ್ಟು ಹಾನಿ ತಪ್ಪಿದೆ. ಆದರೆ. ಈಗಾಗಲೇ 5 ಬಣವಿಗಳಿಗೆ ಬೆಂಕಿ ಆಹುತಿಯಾಗಿರುವುದರಿಂದಾಗಿ ರೈತರು ಸಂಕಷ್ಟು ಸಿಲುಕಿದ್ದಾರೆ. ಸರಕಾರ ರೈತರಿಗೆ ಪರಿಹಾರದ ವ್ಯವಸ್ಥೆ ಮಾಡಿಕೊಡಬೇಕೆಂದು ರೈತರು ವಿನಂತಿಸಿದ್ದಾರೆ.

Comments (0)

Your email address will not be published. Required fields are marked *

Back to top button