ರಾಜ್ಯಸುದ್ದಿ

ಕೊಪ್ಪಳ ಡಿಸಿಗೆ ಸಿಬಿಐ ಕಂಟಕ!

ಕೊಪ್ಪಳ : ತಪ್ಪು ಮಾಡಿರೋರನ್ನ ದಂಡಿಸಬೇಕಾದ ಜಿಲ್ಲಾ ದಂಡಾಧಿಕಾರಿಗಳೆ ತಪ್ಪು ಮಾಡಿದ್ರಾ…? ಅರಣ್ಯ ಭೂಮಿ ಕಳ್ಳರ ಜೊತೆ ಸ್ವತಃ ಜಿಲ್ಲಾಧಿಕಾರಿಗಳೆ ಶಾಮಿಲಾದ್ರಾ ಎನ್ನುವ ಸಂಶಯಗಳು ಮೂಡ್ತಾಯಿದೆ. ಅದಕ್ಕೆ ಕಾರಣ ಜಿಲ್ಲಾಧಿಕಾರಿ ಯೊಬ್ಬರ ಮೇಲೆ ಸಿಬಿಐಗೆ ದೂರು ಸಲ್ಲಿಕೆಯಾಗಿದೆ.

ಸದ್ಯ ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿ ನಳೀನ್ ಅತುಲ್ ಮೇಲೆ ಬಂದಿದೆ. ಸದ್ಯ ಈ ಆರೋಪ ಸಿಬಿಐ ಮೆಟ್ಟಿಲೇರಿದ್ದು ಸೂಕ್ತ ತನಿಖೆಗೆ ಒತ್ತಾಯ ಕೇಳಿ ಬಂದಿದೆ. ಕೊಪ್ಪಳ ತಾಲೂಕಿನ ಹಿಟ್ನಾಳ ಹೋಬಳಿಯ ನಾರಾಯಣ ಪೇಟೆ ಗ್ರಾಮದಲ್ಲಿ 100 ಎಕರೆಗೂ ಅಧಿಕ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಹಂಪಿ ಬುಲ್ಡರ್ಸ, ಹಂಪಿ ವಿಸ್ಕರ್, ಹಂಪಿ ಫೆದರ್ಸ್ ಹೆಸರಿನ ರೆಸಾರ್ಟ್ ನಿರ್ಮಿಸಿದ್ದಾರೆ. ಈ ರೆಸಾರ್ಟ್ ಗಳನ್ನು ತೆರವುಗೊಳಿಸಬೇಕು ಎಂದು 2023 ರ ಡಿಸೆಂಬರ್ 29 ರಂದು ಕೊಪ್ಪಳ ಜಿಲ್ಲಾಧಿಕಾರಿ ನಳೀನ್ ಅತುಲ್ ಆದೇಶ ಹೊರಡಿಸಿದ್ರು, ನಂತರ ಇದುವರೆಗೂ ಯಾವುದೇ ರೆಸಾರ್ಟ್ ತೆರವು ಕಾರ್ಯ ನಡೆದಿಲ್ಲ. ಆದ್ರೆ ಸದ್ಯ ಜಿಲ್ಲಾಧಿಕಾರಿಯ ನಡೆ ಹಲವು ಅನುಮಾನಕ್ಕೆ ಎಡೆ ಮಾಡಿದೆ. ಅಷ್ಟೆ ಅಲ್ಲದೆ ಅಕ್ರಮ ರೆಸಾರ್ಟ್ ನಿರ್ಮಾಣ ಮಾಡಿದವರ ವಿರುದ್ಧ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಳ್ಳಿ ಸದ್ಯ ಜಿಲ್ಲಾಧಿಕಾರಿಯ ವಿರುದ್ಧ ಸಿಬಿಐ ಗೆ ದೂರು ನೀಡಿದ್ದಾರೆ. ಐಎಎಸ್ ಅಧಿಕಾರಿಗಳು ಅಧಿಕಾರ ದುರು ಪಯೋಗ ಪಡಿಸಿಕೊಂಡು, ಅಕ್ರಮ ರೆಸಾರ್ಟ್ ನಿರ್ಮಾಣ ಮಾಡಿದವರು ಜೊತೆ ಶಾಮಿಲಾಗಿ ಅರಣ್ಯ ಭೂಮಿ ಒತ್ತುವರಿ ತೆರವಿಗೆ ಮುಂದಾಗ್ತಾಯಿಲ್ಲ, ಈ ಹಿನ್ನೆಲೆ ಸಿಬಿಐ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ…

ಡಿಸೆಂಬರ್ ನಲ್ಲಿಯೆ ಅಕ್ರಮ ಕಟ್ಟಡ ತೆರವಿಗೆ ಡಿಸಿ ಆದೇಶ ಹೊರಡಿಸಿದ್ದಾರೆ. ಆದೇಶ ಹೊರಡಿಸಿದ ನಂತರ ಎರಡು ತಿಂಗಳೂ ಕಳೆದ್ರು ತೆರವಿಗೆ ಮುಂದಾಗಿಲ್ಲ, ಕೇವಲ ಕೆಳ ಹಂತದ ಅಧಿಕಾರಿಗಳಿಗೆ ಆದೇಶ ಹೊರಡಿಸುವ ಮೂಲಕ ಕಾಲ ಹರಣ ನಡೆಸುತ್ತಿದ್ದಾರೆ. ಈ ಬಗ್ಗೆ ಖುದ್ದು ಜಿಲ್ಲಾಧಿಕಾರಿ ನಳೀನ್ ಅತುಲ್ ಅವರನ್ನ ಸಂಪರ್ಕ ಮಾಡಿದ್ರೆ ತಮ್ಮ ಮೇಲೆ ದೂರು ದಾಖಲಾಗಿರೋ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಈ ಹಿಂದೆ ಅರಣ್ಯ ಭೂಮಿ ಸರ್ವೆ ಮಾಡಿರೋದು ಸರಿಯಾಗಿಲ್ಲ. ಹೀಗಾಗಿ ಮತ್ತೊಮ್ಮೆ ಸರ್ವೆಗೆ ಮಾಡಬೇಕೆಂದು ರೆಸಾರ್ಟ್ ಮಾಲಿಕರು ತಕರಾರು ನೀಡಿದ್ದಾರೆ. ಹೀಗಾಗಿ ಮತ್ತೊಮ್ಮೆ ಸರ್ವೆಗೆ ಆದೇಶ ಮಾಡಲಾಗಿದೆ. ಎಂದು ಹೇಳುತ್ತಲೆ ಈ ವಿಚಾರವಾಗಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಣೆ ಮಾಡಿದ್ದಾರೆ.

ರೆಸಾರ್ಟ್ ತೆರವು ವಿಚಾರವಾಗಿ ಜಿಲ್ಲಾಧಿಕಾರಿಗಳ ನಡೆ ಸಾಕಷ್ಟು ಚರ್ಚೆಯ ಜೊತೆಗೆ ಹಲವು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ. ಒಟ್ನಲ್ಲಿ ಸಿಬಿಐ ಅಧಿಕಾರಿಗಳು ಈ ವಿಚಾರಕ್ಕೆ ಖುಲಂಕುಷವಾಗಿ ತನಿಖೆ ನಡೆಸಿ, ಸತ್ಯ ಅಸತ್ಯೆತೆಯನ್ನ ಹೊರತರುತ್ತಾರ ಕಾದುನೋಡಬೇಕಾಗಿದೆ.

 

Comments (0)

Your email address will not be published. Required fields are marked *

Back to top button