ಸುದ್ದಿ

ಒಂದೇ ಹಂತದ ಉನ್ನತ ಹುದ್ದೆಯಲ್ಲಿ ಸ್ವಂತ ಸಹೋದರರು.!

ಕೋಲ್ಕತಾ: ಸ್ವಂತ ಸಹೋದರರಿಬ್ಬರು ಒಂದೇ ಹಂತದ ಹುದ್ದೆ ಅಲಂಕರಿಸಿದ ಅಪರೂಪದ ವಿದ್ಯಮಾನಕ್ಕೆ ಪೊಲೀಸ್‌ ಇಲಾಖೆ ಸಾಕ್ಷಿಯಾಗಿದೆ. ಎರಡು ಬೇರೆ ಬೇರೆ ರಾಜ್ಯಗಳಲ್ಲಿ ಪೊಲೀಸ್‌ ಮಹಾನಿರ್ದೇಶಕರಾಗಿ (ಡಿಜಿಪಿ) ಇವರು ಸೇವೆ ಸಲ್ಲಿಸುತ್ತಿದ್ದಾರೆ.

ಬಿಹಾರ ಮೂಲದ ಐಪಿಎಸ್ ಅಧಿಕಾರಿಗಳಾದ ವಿಕಾಸ್ ಸಹಾಯ್ ಮತ್ತು ವಿವೇಕ್ ಸಹಾಯ್ ಪೊಲೀಸ್‌ ಇಲಾಖೆಯಲ್ಲಿ ಡಿಜಿಪಿ ಹುದ್ದೆ ಅಲಂಕರಿಸಿದ ಇಬ್ಬರು ಸಾಧಕರು. ಪಶ್ಚಿಮ ಬಂಗಾಳದ ಡಿಜಿಪಿ ಹುದ್ದೆಗೆ ವಿವೇಕ್ ಸಹಾಯ್ ಅವರನ್ನು ಇತ್ತೀಚೆಗೆ ನೇಮಕ ಮಾಡುವುದರೊಂದಿಗೆ ಅಭೂತಪೂರ್ವ ಘಟನೆ ನಡೆದಿದೆ. ಇವರ ಸಹೋದರ ವಿಕಾಸ್ ಸಹಾಯ್ ಕಳೆದ 1 ವರ್ಷದಿಂದ ಗುಜರಾತ್ ಡಿಜಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಮೂಲಕ ಸಹಾಯ್ ಸಹೋದರರಿಬ್ಬರು ಎರಡು ರಾಜ್ಯಗಳ ಡಿಜಿಪಿಯಾಗಿದ್ದಾರೆ. ದೇಶದ ಪೊಲೀಸ್‌ ಇಲಾಖೆಯ ಇತಿಹಾಸದಲ್ಲೇ ಇದು ಮೊದಲು. ಸಹಾಯ್ ಕುಟುಂಬದ ಹಿರಿಯ ಪುತ್ರ ವಿವೇಕ್ ಸಹಾಯ್ ಅವರು ಪಶ್ಚಿಮ ಬಂಗಾಳ ಕೇಡರ್‌ನ 1988 ರ ಬ್ಯಾಚ್ ಐಪಿಎಸ್ ಅಧಿಕಾರಿ. 2024 ರ ಮೇ ಅಂತ್ಯಕ್ಕೆ ನಿವೃತ್ತಿ ಆಗಲಿರುವ ವಿವೇಕ್ ಅವರನ್ನು ಪಶ್ಚಿಮ ಬಂಗಾಳದ ಪೊಲೀಸ್‌ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ

ಸಹಾಯ್ ಕುಟುಂಬದ ಎರಡನೇ ಪುತ್ರರಾದ ವಿಕಾಸ್ ಸಹಾಯ್ ಅವರು 1989ರ ಬ್ಯಾಚ್ಚ ಐಪಿಎಸ್ ಅಧಿಕಾರಿ. ವಿವೇಕ್ ಅವರು 1999ರಲ್ಲಿ ಎಸ್ಪಿಯಾಗಿ ಆಯ್ಕೆಯಾದರು. 2001 ರಲ್ಲಿ ಅಹಮದಾಬಾದ್ ಗ್ರಾಮಾಂತರದಲ್ಲಿ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದಾರೆ.

Comments (0)

Your email address will not be published. Required fields are marked *

Back to top button