ಕ್ರೈಂ ಸ್ಟೋರಿರಾಜ್ಯಸುದ್ದಿ

ಅಕ್ರಮ ರಕ್ತ ಚಂದನ ಸಾಗಾಟ; ಇಬ್ಬರ ಬಂಧನ

ಕೋಲಾರ:  ರಕ್ತ ಚಂದನ ತುಂಡುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದವರ ಇಬ್ಬರನ್ನು ಕೋಲಾರದ ನಂಗಲಿ ಚೆಕ್​ ಪೋಸ್ಟ್​ ಬಳಿ ಪೋಲೀಸರು ಬಂಧಿಸಿದ್ದಾರೆ.

ಬುಲೆರೋ ಪಿಕಪ್ ವಾಹನದಲ್ಲಿ ರಕ್ತ ಚಂದನ ತುಂಡುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು. 30 ಲಕ್ಷ ಬೆಲೆ ಬಾಳುವ 750 ಕೆಜಿ ಯ  31 ಮರದ ತುಂಡುಗಳನ್ನು ವಶಪಡಿಕೊಳ್ಳಲಾಗಿದೆ. ಇಮ್ರಾನ್ ಪಾಷಾ ಬಿನ್ ದಸ್ತಗಿರ್ ಸಾಬ್ (28) , ವಹಾಬ್ ಬಿನ್ ಬಶೀರ್(22) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮುಳಬಾಗಿಲು ವೃತ್ತ ನೀರಿಕ್ಷಕ ಸತೀಶ್ ಹಾಗೂ ನಂಗಲಿ ಪಿಎಸ್ ಐ ಅರ್ಜುನ್ ಗೌಡರ ತಂಡದಿಂದ ಕಾರ್ಯಾಚರಣೆ ನಡೆದಿದ್ದು, ಇಬ್ಬರು ಆರೋಪಿಗಳು ಹಾಗೂ ರಕ್ತ ಚಂದನವನ್ನು ವಶಕ್ಕೆ ಪಡೆಯಲಾಗಿದೆ.

Comments (0)

Your email address will not be published. Required fields are marked *

Back to top button