ರಾಜ್ಯಸುದ್ದಿ

ಮದ್ಯದ ಅಂಗಡಿ ತೆರವಿಗೆ ಗ್ರಾಮಸ್ಥರ ಆಗ್ರಹ

ಕೋಲಾರ : ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಬಳಿ ಮದ್ಯದ ಅಂಗಡಿ ಓಪನ್ ಆದ ಹಿನ್ನೆಲೆ ಅಂಗಡಿ ಮುಚ್ಚಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬೆಗ್ಲಿ ಬೆಣಜೇನಹಳ್ಳಿ ಗ್ರಾಮಸ್ಥರು ಹಾಗು ಸುತ್ತಮುತ್ತಲಿನ ಜನರಿಂದ ಪ್ರತಿಭಟನೆ ನಡೆಸಿದ್ದು, ಮದ್ಯದ ಅಂಗಡಿ ತೆರವು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಕೆಲ ದಿನಗಳ ಹಿಂದೆ ಗ್ರಾಮಸ್ಥರ ವಿರೋಧ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಮದ್ಯಪಾನ ಅಂಗಡಿ ಮುಚ್ಚಲಾಗಿತ್ತು.  ಕೋಲಾರ ಶಾಸಕರ ಆಪ್ತರಾಗಿರುವ ರಾಮಕೃಷ್ಣಗೌಡ ಎಂಬುವರಿಗೆ ಸೇರಿರುವ ಬಿಲ್ಡಿಂಗ್ ಆಗಿದ್ದು, ಹಣದ ಪ್ರಾಭಲ್ಯದಿಂದ ಮತ್ತೆ ಬಾರ್ ಓಪನ್ ಮಾಡಿದ್ದಾರೆಂದು ಗ್ರಾಮಸ್ಥರ ಆರೋಪ ಮಾಡಿದ್ದಾರೆ. ಇಂದು ಬಾರ್ ಮತ್ತೆ ಓಪನ್ ಮಾಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಿದರು. ಯಾವುದೇ ಅಹಿತಕರ ಘಟನೆಯಾಗದಂತೆ ಮುನ್ನೆಚ್ಚರಿಕೆಯಿಂದ ಬಾರ್ ಗೆ ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿದೆ.

Comments (0)

Your email address will not be published. Required fields are marked *

Back to top button