Wednesday, April 30, 2025
24 C
Bengaluru
LIVE
ಮನೆರಾಜ್ಯಇನ್ವಿಟೇಷನ್ ಕೊಟ್ಟಿದ್ರೆ ನಾನು ಹೋಗ್ತಿದ್ದೆ..! : ಶಾಸಕ ಕೊತ್ತೂರು ಮಂಜುನಾಥ್

ಇನ್ವಿಟೇಷನ್ ಕೊಟ್ಟಿದ್ರೆ ನಾನು ಹೋಗ್ತಿದ್ದೆ..! : ಶಾಸಕ ಕೊತ್ತೂರು ಮಂಜುನಾಥ್

ಕೋಲಾರ:  ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ನನಗೆ ಆಹ್ವಾನ ಬಂದಿಲ್ಲ. ಇನ್ವಿಟೇಷನ್ ಕೊಟ್ಟಿದ್ದಿದ್ದರೆ ಹೋಗುತ್ತಿದ್ದೆ, ಈಗ ಆಹ್ವಾನ ಬಂದಿಲ್ಲ. ಹಾಗಾಗಿ ನಾನು ಹೋಗುವುದಿಲ್ಲ ಎಂದು ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹೇಳಿದ್ದಾರೆ.

ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್, ಮಂದಿರಕ್ಕೆ ಹೋಗದಿದ್ದರೂ ನಮ್ಮ ಸಂಪ್ರದಾಯದಂತೆ ಪೂಜೆ ಮಾಡುತ್ತೇವೆ. ಬೇರೆಯವರು ಅಯೋಧ್ಯೆಗೆ ಹೋಗುವುದು, ಹೋಗದಿರುವುದು ಅವರವರ ವೈಯಕ್ತಿಕ ಅಭಿಪ್ರಾಯ. ನನಗೆ ಆಹ್ವಾನ ಬಂದಿದ್ದರೆ ನಾನು ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ. ಆದ್ರೆ ಇನ್ವಿಟೇಷನ್ ಬಂದಿಲ್ಲ. ಹಾಗಾಗಿ ನಾನು ಹೋಗುವುದಿಲ್ಲ. ಅಂದು ದೇವರಿಗೆ ನಮಸ್ಕಾರ ಹಾಕಿಕೊಂಡು ಮನೆಯಲ್ಲೇ ಇರುತ್ತೇನೆ. ಕಡಿಮೆ ಜನಕ್ಕೆ ಮಾತ್ರ ಆಹ್ವಾನ ಕೊಟ್ಟಿದ್ದಾರೆ. ಯಾರ್ಯಾರಿಗೆ ಕೊಟ್ಟಿದ್ದಾರೋ ಗೊತ್ತಿಲ್ಲ. ಅಯೋಧ್ಯಗೆ ಹೋಗುವುದು ಪಕ್ಷದ ವಿಚಾರ ಅಂತ ಬರುವುದಿಲ್ಲ. ರಾಮ ಮಂದಿರಕ್ಕೆ ಹೋಗುವುದು, ಬಿಡುವುದು ಅವರವರ ವೈಯಕ್ತಿಕ ವಿಚಾರ. ನಾನು ರಾಮರಾಜ್ಯ ಆಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

ನನ್ನ ಪ್ರಕಾರ ಎಲ್ಲಾ ದೇವರು ಒಂದೇ. ನಾನು ಚರ್ಚಿಗೂ ಹೋಗುತ್ತೇನೆ, ಮಸೀದಿಗೂ ಹೋಗುತ್ತೇನೆ, ರಾಮ ಮಂದಿರಕ್ಕೂ ಹೋಗುತ್ತೇನೆ. ರಾಮನ ಆಶೀರ್ವಾದದಿಂದ ದೇಶದ ರೈತರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುತ್ತೇನೆ. ದೇಶದಲ್ಲಿನ ಶಿಕ್ಷಣ, ಉದ್ಯೋಗಕ್ಕೂ ಒಳ್ಳೆಯದಾಗಲಿ ಎಂದು ರಾಮನಲ್ಲಿ ಪ್ರಾರ್ಥಿಸುವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ರಾಮಮಂದಿರ ಉದ್ಘಾಟನೆಗೆ ಹೋಗದಿರುವ ತೀರ್ಮಾನದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೊತ್ತೂರು ಮಂಜುನಾಥ್, ನನಗೆ ಆಹ್ವಾನ ಬಂದಿದ್ದರೆ ನನ್ನನ್ನು ಯಾರು ಬೇಡ ಅಂತ ಹೇಳಿದ್ದರೂ ನಾನು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ. ರಾಜಕೀಯ ಪಕ್ಷದಲ್ಲಿ ನಮಗೆ ಕೊಟ್ಟಿರುವ ಜವಾಬ್ದಾರಿ ಸ್ಥಾನದಲ್ಲಿ ನಾವು ಇದ್ದೇವೆ. ಪಕ್ಷ ಹೇಳಿದ ಮಾತಿಗೆ ನಾವು ಗೌರವ ಕೊಡ್ತೇವೆ. ಆದ್ರೆ ದೇವಸ್ಥಾನಕ್ಕೆ ಹೋಗುವುದು, ಪೂಜೆಗೆ ಹೋಗುವ ವಿಚಾರ ನಮ್ಮ ವೈಯಕ್ತಿಕ. ನಾನು ಮದುವೆ ಆಗ್ತೀನಿ ಅಂತ ಪಕ್ಷದಲ್ಲಿ ಕೇಳಿ ಮದುವೆಯಾಗೋಕೆ ಆಗುತ್ತಾ? ವೈಯಕ್ತಿಕ ವಿಚಾರಗಳೇ ಬೇರೆ, ಪಕ್ಷವೇ ಬೇರೆ. ಪಕ್ಷ ಅಂತ ಬಂದಾಗ ಪಕ್ಷದ ಸಿದ್ಧಾಂತಗಳಿಗೆ ನಾವು ಕಟ್ಟುಪಾಡಾಗಿ ಇರ್ತೇವೆ. ವೈಯಕ್ತಿಕವಾಗಿ ಕೋಲಾರಮ್ಮ ದೇವಸ್ಥಾನಕ್ಕೆ ಹೋಗುತ್ತೇವೆ ಅಂದರೆ ಬೇಡ ಅಂತ ಹೇಳಲು ಆಗುತ್ತಾ? ದರ್ಗಾಗೆ ಹೋಗಬೇಡ, ಚರ್ಚಿಗೆ ಹೋಗಬೇಡಾ ಅಂದ್ರೆ ಕೇಳೋಕೆ ಆಗುತ್ತಾ? ನಾನು ಹೋಗುತ್ತೇನೆ. ದೇವಸ್ಥಾನಗಳಿಗೆ ಹೋಗುವ ವಿಚಾರದಲ್ಲಿ ಯಾರನ್ನೂ ಯಾರು ಪ್ರಶ್ನೆ ಮಾಡುವ ಆಗಿಲ್ಲ ಎಂದರು.

ಇನ್ನು ಮಾಲೂರು ಶಾಸಕ ಕೆವೈ ನಂಜೇಗೌಡ ಮನೆ ಮೇಲೆ ಇಡಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ವಾಸ್ತವಾಂಶ ನನಗೆ ಗೊತ್ತಿಲ್ಲ. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ, ಈ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ .

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments