ಕೋಲಾರ : ಸಂಸದ ಡಿ.ಕೆ.ಸುರೇಶ್ ಅವರ ಉತ್ತರ ಭಾರತ ಮತ್ತು ದಕ್ಷಿಣ ಭಾರತ ವಿಭಜನೆ ಹೇಳಿಕೆ ವಿರುದ್ದ ಸಂಸದ ಎಸ್.ಮುನಿಸ್ವಾಮಿ ಕಿಡಿಕಾರಿದ್ದಾರೆ. ಕೋಲಾರದಲ್ಲಿ ಮಾದ್ಯಮಗಳ ಜೊತೆ ಮಾತನಾಡಿ ಲೋಕಸಭಾ ಸದಸ್ಯರು ಮತ್ತು ಶಾಸಕರು ಪ್ರಮಾಣ ವಚನ ಮಾಡುವಾಗ ದೇಶದ ಐಕ್ಯತೆ ಅಖಂಡತೆಯನ್ನು ಎತ್ತಿ ಹಿಡಿಯುವುದಾಗಿ ಪ್ರಮಾಣ ವಚನ ಮಾಡುತ್ತೇವೆ ಆದರೆ ಕಾಂಗ್ರೆಸ್ ಪ್ರವೃತ್ತಿ ಮೊದಲಿನಿಂದಲೂ ಬ್ರಿಟಿಷರ ರೀತಿ ಒಡೆದು ಆಳುವ ರೀತಿಯನ್ನು ಅನುಸರಿಸುತ್ತಿದ್ದಾರೆ.
ಹಿಂದಿನಿಂದಲೂ ಕಾಂಗ್ರೆಸ್ ನ ನೆಹರು ಅವರಿಂದ ಹಿಡಿದು ಇಂದಿರಗಾಂದಿಯವರೆಗೂ ಚೀನಾ,ಪಾಕಿಸ್ತಾನ, ಬಾಂಗ್ಲಾ ಜೊತೆ ಹೊಂದಾಣಿಕೆ ಮಾಡಿಕೊಂಡು ಬಂದವರು ಈಗ ಉತ್ತರ ಮತ್ತು ದಕ್ಷಿಣ ಭಾರತ ವೆಂದು ವಿಭಾಗಿಸುವಂತೆ ಸುರೇಶ್ ಅವರು ಹೇಳುತ್ತಿದ್ದಾರೆ,
ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೇ ಕೊಡಬೇಕು, ಇಂತಹ ಹೇಳಿಕೆಗಳು ಕಾಂಗ್ರೆಸ್ ನವರಿಂದ ಮಾತ್ರ ಕೇಳಲು ಸಾದ್ಯ
ಫೆ.27 ರಂದು ದೆಹಲಿಗೆ ಬಂದು ಹೋರಾಟ ಮಾಡುತ್ತಾರೆ ಆಂತೆ, ನಾವು 303 ಜನ ಸದಸ್ಯರು ಇದ್ದು ನಾವು ಸಹ ಪ್ರತಿಭಟನೆ ಮಾಡುತ್ತೇವೆ, ಪ್ರತಿ ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದದ ಭ್ರಷ್ಟಾಚಾರ ದ ವಿರುದ್ದ ಹೋರಾಟ ಮಾಡುತ್ತೆವೆ, ಕಾಂಗ್ರೆಸ್ ನ ಗ್ಯಾರೆಂಟಿಗಳಿಗೆ ವಾರೆಂಟಿ ಇಲ್ಲ ಅದಿಕಾರಕ್ಕೆ ಬಂದ ಏಳು ತಿಂಗಳಲ್ಲೇ ಅವರ ಭ್ರಷ್ಟಾಚಾರ ಯಾವ ಮಟ್ಟ ತಲುಪಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೋಲಾರ ಲೋಕಸಭಾ ಕ್ರೇತ್ರದ ಟಿಕೆಟ್ ನಮ್ಮ ನಾಯಕರಿಗೆ ಬಿಟ್ಟಿದ್ದು ಇಲ್ಲ ಕಳೆದ ನಲವತ್ತು ವರ್ಷಗಳಿಂದ ಯಾರು ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬುದು ಹೈಕಮಾಂಡ್ ಗೆ ಗೊತ್ತಿದೆ ಬಿಜೆಪಿ ಟಿಕೆಟ್ ಸಿಕ್ಕರೆ ಜೆಡಿಎಸ್ ನವರು ನಮ್ಮ ಪರವಾಗಿ ಕೆಲಸ ಮಾಡುತ್ತಾರೆ , ಅವರಿಗೆ ಟಿಕೆಟ್ ಸಿಕ್ಕರೆ ನಾವು ಅವರ ಪರವಾಗಿ ಕೆಲಸ ಮಾಡುತ್ತೇವೆ , ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಟಿಕೆಟ್ ಕೇಳುವ ಅರ್ಹತೆ ಇದೆ , ಯಾರು ಕೆಲಸ ಮಾಡಿದ್ದಾರೆ ಎಂಬುದು ನಮ್ಮ ನಾಯಕರಿಗೆ ತಿಳಿದಿದೆ ಎಂದು ಸಂಸದ ಎಸ್ ಮುನಿಸ್ವಾಮಿ ತಿಳಿಸಿದ್ದಾರೆ.