ಕೋಲಾರ : ನಗರ ಸಭೆಯ ಮಾಜಿ ಅಧ್ಯಕ್ಷರಿಗೆ ಚೆಕ್‌ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯ ದಂಡ ವಿಧಿಸಿದೆ. ತಪ್ಪಿದಲ್ಲಿ ಆರು ತಿಂಗಳು ಜೈಲು ಶಿಕ್ಷೆ ನೀಡುವ ಎಚ್ಚರಿಕೆಯನ್ನು ನೀಡಲಾಗಿದೆ.ಮೂರು ಪ್ರತ್ಯೇಕ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಬಿ.ಎಂ.ಮುಭಾರಕ್‌ಗೆ ಕೋಲಾರದ ಹೆಚ್ಚುವರಿ ಜೆಎಂಎಫ್‌ಸಿ ಕೋರ್ಟ್ ದಂಡ ಮತ್ತು ಶಿಕ್ಷೆ ವಿಧಿಸಿ ಆದೇಶ ಹೊರಡಿಸದೆ.ಬಿ.ಎಂ.ಮುಭಾರಕ್ ವಿರುದ್ಧ ೨೦೧೮ ದಾಖಲಾಗಿದ್ದ ಮೂರು ಪ್ರತ್ಯೇಕ ಚೆಕ್ ಬೌನ್ಸ್ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ಧೀರ್ಘವಾದ ಪ್ರತ್ಯೇಕ ಆದೇಶಗಳನ್ನು ಹೊರಡಿಸಿದ್ದಾರೆ.
ಉದ್ಯಮಿ ಎನ್.ಗೋಪಾಲಕೃಷ್ಣ ನೆಗೋಶಿಯಬಲ್ ಇನ್ಸುಮೆಂಟ್ ಆಕ್ಟ್ ಸೆಕ್ಷನ್ ೧೩೮ ರ ಮೇರೆಗೆ ದಾಖಲಿಸಲಾಗಿದ್ದ ದೂರುಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ಮುಭಾರಕ್ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಕೋಟಿ ರೂಪಾಯಿ ದಂಡ ಪಾವತಿ ಮಾಡಬೇಕು, ತಪ್ಪಿದಲ್ಲಿ ಆರು ತಿಂಗಳ ಶಿಕ್ಷೆ ಅನುಭವಿಸುವಂತೆ ಆದೇಶ ಹೊರಡಿಸಿದ್ದಾರೆ, ಆರೋಪಿ ಮುಭಾರಕ್ ನ್ಯಾಯಾಲಯದ ಮುಂದೆ ಹಾಜರಾಗದೆ ತಲೆ ಮರಿಸಿಕೊಂಡಿದ್ದು ಆರೋಪಿಗೆ ನೀಡಲಾಗಿದ್ದ ಜಾಮೀನನ್ನು ನ್ಯಾಯಾಲಯ ರದ್ದುಪಡಿಸಿದೆ.
ರಾಯಲ್ ಟ್ರೇಡರ್ಸ್ ಹೆಸರಿನಲ್ಲಿ ಕೋಲಾರದ ಕೊಂಡರಾಜನಹಳ್ಳಿ ದರ್ಗಾದ ಬಳಿ ವ್ಯಾಪರ ವಹಿವಾಟು ಮತ್ತು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಹೋಬಳಿ ತಾವರೆಕೆರೆಯಲ್ಲಿ ಎಂ.ಎಸ್.ಪೌಲ್ಟ್ರಿ , ಕೋಳಿ ಸಾಕಾಣಿಕೆ ಉದ್ಯಮ ನಡೆಸುತ್ತಿರುವ ಮುಭಾರಕ್, ಗೋಪಾಲಕೃಷ್ಣ ಅವರಿಂದ ಕಳೆದ ನವೆಂಬರ್ ೧೫, ೨೦೧೭ ರಲ್ಲಿ ೫೦ ಲಕ್ಷ ರೂ. ಸಾಲ ಪಡೆದಿದ್ದರು. ಐವತ್ತು ಲಕ್ಷ ರೂ. ಅಲ್ಲದೆ ಬೇರೆ ಬೇರೆ ದಿನಾಂಕಗಳಲ್ಲಿ ಮುಭಾರಕ್ ಗೋಪಾಲಕೃಷ್ಣ ಅವರಿಂದ ಒಟ್ಟು ಎರಡು ಕೋಟಿ ರೂ. ಸಾಲ ಪಡೆದಿದ್ದರು. ಮುಭಾರಕ್ ಗೋಪಾಲಕೃಷ್ಣ ಅವರಿಂದ ಪಡೆದಿದ್ದ ಸಾಲ ಮರುಪಾವತಿಗೆ ಮೂರು ಪ್ರತ್ಯೇಕ ಚೆಕ್‌ಗಳನ್ನು ನೀಡಿದ್ದು ಚೆಕ್‌ಗಳನ್ನು ನಗದೀಕರಣ ಮಾಡಲು ಬ್ಯಾಂಕ್‌ಗೆ ಹಾಜರುಪಡಿಸಿದಾಗ ಬೌನ್ಸ್ ಆಗಿದ್ದವು ಇದರಿಂದಾಗಿ ಗೋಪಾಲಕೃಷ್ಣ ಅವರು ವಕೀಲರ ಮೂಲಕ ಮುಭಾರಕ್‌ಗೆ ಸಾಲ ಮರುಪಾವತಿ ಮಾಡಲು ನೋಟೀಸ್ ಜಾರಿ ಮಾಡಿದ್ದರು ಆದರೆ ಮುಭಾರಕ್ ಆ ವಿಳಾಸದಲ್ಲಿ ಲಭ್ಯವಿಲ್ಲ ಎಂದು ನೋಟೀಸ್ ವಾಪಸ್ ಬಂದಿತ್ತು ಇದರಿಂದ ಬಾಧಿತರಾದ ಗೋಪಾಲಕೃಷ್ಣ ಕೋಲಾರದ ಹೆಚ್ಚುವರಿ ಒಂದನೇ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ನೆಗೋಷಬಲ್ ಇನ್ಸ್ಟುಮೆಂಟ್ ಆಕ್ಟ್ ಸೆಕ್ಷನ್ ೧೩೮ರ ಪ್ರಕಾರ ದೂರು ದಾಖಲಿಸಿದ್ದರು.
ಆದ್ರೆ ಮುಬಾರಕ್ ಈ ಆರೋಪವನ್ನ ನಿರಾಕರಿಸಿದ್ದಾರೆ,ಗೋಪಾಲಕೃಷ್ಣ ಆ ಚೆಕ್‌ಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ನಾನು ಅವರಿಂದ ಯಾವುದೇ ಸಾಲ ಪಡೆದಿಲ್ಲ ಎಂದು ಮೊದಲ ಬಾರಿಗೆ ಆರೋಪಿ ಮುಭಾರಕ್ ಆಕ್ಷೇಪ ವ್ಯಕ್ತಪಡಿಸಿದ್ದರು, ಮುಭಾರಕ್ ರವರ ಈ ಆಕ್ಷೇಪವನ್ನು ನ್ಯಾಯಾಲಯ ತಳ್ಳಿ ಹಾಕಿದೆ.