ಕೊಡಗು ಜಿಲ್ಲೆಯ ಪೊನ್ನೋಂಪೇಟೆ ತಾಲೂಕಿನ ಬೇಗೂರಿನಲ್ಲಿ ಸಹೋದರನಿಂದಲೇ ತಮ್ಮನಿಗೆ ಗುಂಡು ಹಾರಿಸಿ, ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಕಾಂಗ್ರೆಸ್ ಪಕ್ಷದ ಮುಖಂಡ ಅರ್ವತೋಕ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಂಡ ಪ್ರಕಾಶ್ (57) ಮೃತ ದುರ್ದೈವಿ. ಪ್ರಕಾಶ್ ಎಂಬವರಿಗೆ ಅವರ ಸಹೋದರ ಸುಬ್ರಮಣಿ ಇದೀಗ ಬೇಗೂರು ತೋಟದಲ್ಲಿ ಗುಂಡು ಹೊಡೆದ ಪರಿಣಾಮ ಪ್ರಕಾಶ್ ಮೃತಪಟ್ಟಿದ್ದಾರೆ. ಪ್ರಕಾಶ್ ಪುತ್ರನಿಗೂ ಗುಂಡು ತಗಲಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ಘಟನೆಗೆ ಸೂಕ್ತ ಕಾರಣ ಇನ್ನೂ ತಿಳಿದು ಬಂದಿಲ್ಲ. ಪೊನ್ನಂಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ವಿವರ ಪಡೆದುಕೊಳ್ಳುತ್ತಿದ್ದಾರೆ.