ಸಿಎಂ ಸಿದ್ದರಾಮಯ್ಯ ಸರ್ಕಾರದ ಕೆಲ ಮಂತ್ರಿಗಳು ಉದಾಸೀನದಿಂದ ಹೊರಬರದೆ ಇರೋ ಹೊತ್ತಲ್ಲಿ ಕೆಲ ಸಚಿವರು ಸಕ್ರಿಯವಾಗಿ ಕೆಲಸ ಮಾಡೋ ಮೂಲಕ ಸದ್ದು ಮಾಡ್ತಿದ್ದಾರೆ. ಲೋಕೋಪಯೋಗಿ ಇಲಾಖೆಯನ್ನು ಸುಧಾರಿಸುವ ಬಗ್ಗೆ ಆಸಕ್ತಿ ತೋರಿಸ್ತಿರೋ ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದಾರೆ.
ಇನ್ನು ಕಳಪೆ ಕಾಮಗಾರಿಗಳಿಗೆ ಕಾರಣವಾಗಿದ್ದ ಲೋಪವೊಂದನ್ನು ಸರಿಪಡಿಸಲು ಸಚಿವ ಸತೀಶ್ ಜಾರಕಿಹೊಳಿ ಮುಂದಾಗಿದ್ದಾರೆ. ಎಸ್.ಆರ್. ರೇಟ್ ಗಿಂತಲೂ ಕಡಿಮೆ ದರ ನಮೂದಿಸಿ ಕಾಮಗಾರಿ ಪಡೆದು ಕೆಲಸ ಮಾಡ್ತಿದ್ದ ಗುತ್ತಿಗೆದಾರರ ಮೇಲೆ ನಿಗಾ ಇಡಲು ಹೊಸ ಆದೇಶ ಹೊರಡಿಸಿದ್ದಾರೆ. ಈ ಆದೇಶದಂತೆ ಸರ್ಕಾರಿ ದರಕ್ಕಿಂತ ಕಡಿಮೆ ಕಡಿಮೆ ಮೊತ್ತಕ್ಕೆ ಇಲಾಖೆ ಕೆಲಸ ಮಾಡುವ ಗುತ್ತಿಗೆದಾರರು ಇನ್ಮುಂದೆ ಕಡ್ಡಾಯವಾಗಿ ಸ್ಪಾಟ್ ಇನ್ಸ್ ಪೆಕ್ಷನ್ ಬಿಸಿ ಎದುರಿಸಲಿದ್ದಾರೆ.

ಇದೇ ನವೆಂಬರ್ 6 ರಂದು ಸಚಿವರು ಇಲಾಖೆ ಪ್ರೆಗತಿಪರಿಶೀಲನೆ ಸಭೆ ನಡೆಸಿದ್ದಾರೆ. ಈ ವೇಳೆ ಡಿವಿಷನ್ ಒಂದರ ಪ್ರಗತಿ ಪರೀಶಲನೆ ವೇಳೆ ಹೆಚ್ಚಿನ ಸಂಖ್ಯೆಯ ಗುತ್ತಿಗೆದಾರರು ಕಡಿಮೆ ದರ ಕೋಟ್ ಮಾಡಿ ಕಲಸ ಪಡೆಯುತ್ತಿರುವುದು ಕಂಡುಬಂದಿದೆ. SR ರೇಟ್ ಗಿಂತ ಕಡಿಮೆ ಗುತ್ತಿಗೆ ದರ ಪಡೆದ ಕಾಮಗಾರಿಗಳ ಅನುಷ್ಠಾನದ ವಿಚಾರದಲ್ಲಿ ಆಗುವ ಸಮಸ್ಯೆಗಳನ್ನು ಸಚಿವರು ಸಚಿವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಅಲರ್ಟ್ ಆದ ಸಚಿವರು, ಇನ್ಮುಂದೆ ಕಡಿಮೆ ದರ ನಮೂದು ಮಾಡಿ ನಡೆಯುತ್ತಿರುವ ಎಲ್ಲ ಕೆಲಸಗಳ ಗುಣಮಟ್ಟ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಈ ಸೂಚನೆ ಅನ್ವಯ ಲೋಕೋಪಯೋಗಿ ಇಲಾಖೆ ಆಂತರಿಕ ಆರ್ಥಿಕ ಸಲಹೆಗಾರ ಡಾ.ಸೋಮನಾಥ್ ಹೊಸ ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆ ಅನ್ವಯ ಕಡಿಮೆ ದರ ನಮೂದಿಸಿದ ಕಾಮಗಾರಿಗಳನ್ನು ಕಡ್ಡಾಯವಾಗಿ ಆಯಾ ಸರ್ಕಲ್ ನ ಅಧೀಕ್ಷಕ ಎಂಜಿನಿಯರ್ ಮತ್ತು ಕ್ವಾಲಿಟಿ ಕಂಟ್ರೋಲ್, ವಿಜಿಲೆನ್ಸ್ ಸೂಪರಿಂಟೆಂಡೆಂಟ್ ಎಂಜಿನಿಯರ್ ಗಳು ಜಂಟಿಯಾಗಿ ಇನ್ಸಪೆಕ್ಷನ್ ನಡೆಸಿ ವರದಿ ನೀಡಬೇಕಾಗಿದೆ. ನಂತರವೇ ಬಿಲ್ ಬರೆಯಲು ಶಿಫಾರಸು ಮಾಡಬೇಕೆಂದು ಆದೇಶ ಮಾಡಲಾಗಿದೆ. ಜತೆಗೆ ಗುಣಮಟ್ಟ ಕಾಯ್ದುಕೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಹೊಣೆ ವಹಿಸಲಾಗಿದೆ.
ಇದುವರೆಗೆ ಕೆಲ ಗುತ್ತಿಗೆದಾರರು ಶೇ.35 ರಷ್ಟವರೆಗೂ ಲೆಸ್ ನಮೂದಿಸಿ ಕೆಲಸ ಪಡೀತಿದ್ರು. ಇದು ಗುತ್ತಿಗೆದಾರರ ಮಧ್ಯೆ ಅನಾರೋಗ್ಯಕರ ಸ್ಪರ್ಧೆಗೂ ಕಾರಣ ಆಗಿತ್ತು. ಕಡಿಮೆ ಕೋಟ್ ಮಾಡಿದ್ದವರಿಂದ ಕೆಲಸ ಪಡೆಯಲು ಎಂಜಿನಿಯರ್ ಗಳಿಗೂ ಕಷ್ಟ ಆಗುತ್ತಿತ್ತು. ಇದೀಗ ರೆಗ್ಯುಲರ್ SE ಗಳಿಗೆ ಗುಣಮಟ್ಟ ನಿಯಂತ್ರಣದ ಹೊಣೆ ಕೊಟ್ಟಿರುವುದು ಲೆಸ್ ಕೋಟ್ ಗುತ್ತಿಗೆದಾರರಿಗೆ ಮೂಗುದಾರ ಹಾಕಿ ಗುಣಮಟ್ಟ ಸುಧಾರಣೆಯ ನಿರೀಕ್ಷೆ ಮಾಡಲಾಗಿದೆ.


