Wednesday, January 28, 2026
18.8 C
Bengaluru
Google search engine
LIVE
ಮನೆರಾಜಕೀಯಕಲಬುರ್ಗಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ರಾಧಾಕೃಷ್ಣ ದೊಡ್ಮನಿ

ಕಲಬುರ್ಗಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ರಾಧಾಕೃಷ್ಣ ದೊಡ್ಮನಿ

ಕಲಬುರ್ಗಿ: ಕಲಬುರ್ಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಅವರು ಇಂದು ಸಂಜೆ ಆಗಮಿಸಿದರು. ಗಂಜ್ ಪ್ರದೇಶದ ನಗರೇಶ್ವರ ಶಾಲೆಯ ಬಳಿ ಅವ್ರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಡೊಳ್ಳು ಹಾಗೂ ಬಂಜಾರ ಸಮುದಾಯದ ಮಹಿಳೆಯರ ಸಾಂಪ್ರದಾಯಿಕ ನೃತ್ಯದ ಮೂಲಕ ಅವರನ್ನು ಬರಮಾಡಿಕೊಳ್ಳಲಾಯಿತು.

ಇನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ನಗರದತ್ತ ಹೊರಟ ರಾಧಾಕೃಷ್ಣ ಅವರು ಇಕ್ಕೆಲಗಳಲ್ಲಿ ನೆರೆದಿದ್ದ ಪಕ್ಷದ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಅಭಿಮಾನದಿಂದ ಕೈಬಿಸಿದ್ರು.

ಈ ಸಂದರ್ಭದಲ್ಲಿ ಯುವಕರು ಬೈಕ್ ರ್ಯಾಲಿ ಮಾಡಿದ್ರು. ಸಚಿವರಾದ ಶರಣಪ್ರಕಾಶ ಪಾಟೀಲ, ಕೇಕೆಆರ್ಡಿಬಿ ಅಧ್ಯಕ್ಷರಾದ ಅಜಯ ಸಿಂಗ್, ಶಾಸಕರಾದ ಅಲ್ಲಂಪ್ರಭೂ ಪಾಟೀಲ್, ಕನಿಜ್ ಫಾತಿಮಾ, ತಿಪ್ಪನ್ನಪ್ಪ ಕಮಕನುರು, ರೇವು ನಾಯಕ ಬೆಳಮಗಿ, ಮಾಜರ್ ಖಾನ್ ಸೇರಿದಂತೆ ಹಲವರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments