ಕಲಬುರಗಿ : ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಅಮಿತ್ ಶಾ ಅವರನ್ನು ಮಾಧ್ಯಮದವರು ದೊಡ್ಡ ಚಾಣಕ್ಯ ಅಂತ ಬಿಂಬಿಸುತ್ತಿದ್ದಿರಾ.. ಇಲ್ಲಿಯವರೆಗೂ ಬಿಜೆಪಿ ಅವರು ಯಾವುದೇ ರಣತಂತ್ರದಿಂದ ಇವರು ಚುನಾವಣೆ ಗೆದ್ದಿಲ್ಲ. ಯಾವಾಗಲೂ ಆಪರೇಷನ್ ಕಮಲ ಮೂಲಕ ಐಟಿ, ಇಡಿ, ಸಿಬಿಐ ಮುಂಚೂಣಿ ಘಟಕಗಳಿಂದ ಚುನಾವಣೆ ಗೆದ್ದಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಶಾಸಕರನ್ನು ಐಟಿ, ಇಡಿ ಮೂಲಕ ಖರೀದಿ ಮಾಡುತ್ತಿದ್ದಾರೆ ಅದರಲ್ಲಿ ರಣ ತಂತ್ರ ಏನಿದೆ?. ಯಾಕೆ ಪದೆ, ಪದೆ ಅಮಿತ್ ಶಾ ಗೆ ಚಾಣಕ್ಯ ಅಂತ ಹೇಳುತ್ತಿರಾ? ಎಂದು ಪ್ರಶ್ನಿಸಿದರು. ಐಟಿ, ಇಡಿ, ಸಿಬಿಐ ನನ್ನ ಕೈಗೆ ಕೊಡಿ, ನಾನು ಚಾಣಕ್ಯ ಆಗುತ್ತೆನೆ. ಇಲ್ಲಿವರೆಗೆ ಇವರು ಏನ ಮಾಡಿದ್ದಾರೆ ಹೇಳಿ.. ಕರ್ನಾಟಕಕ್ಕೆ ಗೃಹ ಸಚಿವರು ಬಂದ್ರೆ ಸ್ವಾಗತ.. ಹಳೆಯ ಬಿಜೆಪಿಯವರು ಗೋ ಬ್ಯಾಕ್ ಅಮಿತ್ ಶಾ ಅಭಿಯಾನ ಮಾಡಬಹುದು ಎಚ್ಚರದಿಂದಿರಿ ಎಂದು ಹೇಳಿದರು.
ರಾಜ್ಯದಲ್ಲಿ ಓಲ್ಡ್ ಬಿಜೆಪಿ, ನ್ಯೂವ್ ಬಿಜೆಪಿ ಎರಡು ತಂಡ ಆಗಿವೆ. ಮೋದಿ, ಶಾ ಅವರ ಇಂಪ್ಯಾಕ್ಟ್ ಯಾವಾಗ ಆಗಿದೆ. ಮೋದಿ, ಶಾ ಅವರನ್ನು ಗಲ್ಲಿ, ಗಲ್ಲಿ ಅಡ್ಡಾಡಿಸಿಲ್ವಾ, ಅವರ ರಣತಂತ್ರದಿಂದ ನಾವು ರಾಜ್ಯದಲ್ಲಿ 136 ಸೀಟ್ ಗೆದ್ದಿದ್ದೇವೆ. ಅಮಿತ್ ಶಾ ಅವರದ್ದು ಏನು ಇಂಪ್ಯಾಕ್ಟ್ ಆಗುತ್ತೆ. ಬಂದಾ ಪುಟ್ಟ, ಹೋದ ಪುಟ್ಟ. ಕೇಂದ್ರದಿಂದ ಯಾವುದೇ ಪರಿಹಾರ ಬಂದಿಲ್ಲ. ಸಂಸತ್ತಿನಲ್ಲಿ ಕನ್ನಡಿಗರ ಬಗ್ಗೆ ಚಕಾರ ಎತ್ತದ ಸಂಸದರಿಗೆ ಈ ಬಾರಿ ಗೇಟ್ ಪಸ್ ಕೋಡುತ್ತಾರೆ ತಿಳಿಸಿದರು.