ಕಲಬುರ್ಗಿ : ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆಯವರ ತವರು ಜಿಲ್ಲೆಯಲ್ಲೇ ರೋಗಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಕಲಬುರ್ಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳು ಪರದಾಡುತ್ತಿದ್ದರೆ. ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿರುವ ಐಸಿಯುನಲ್ಲಿ ಎಸಿಗಳಿಲ್ಲ, ಇದರಿಂದ ರೋಗಿಗಳು ಪರದಾಡುತ್ತಿದ್ದಾರೆ.
ಬೇಸಿಗೆ ಇರೋದ್ರಿಂದ ಜಿಲ್ಲೆಯಲ್ಲಿ ಬಾರಿ ಬಿಸಿಲು ಇದೆ. ಇನ್ನೂ ಹವಾಮಾನ ಇಲಾಖೆ ಕೂಡ ಜಿಲ್ಲೆಯಲ್ಲಿ 48 ಗಂಟೆ ಒಣ ಗಾಳಿ ಬಿಸುತ್ತದೆ ಎಂದು ಮಾಹಿತಿ ನೀಡಿದೆ. ಐಸಿಯುನಲ್ಲಿ ಪ್ಯಾನ್ ಗಳ ವ್ಯವಸ್ಥೆ ಕೂಡ ಇಲ್ಲ ಇದರಿಂದ ರೋಗಿಗಳು ಪರದಾಡುತ್ತಿದ್ದಾರೆ. ಕೆಲವೊಬ್ಬರು ಮನೆಯಿಂದ ಪ್ಯಾನ್ ಗಳನ್ನು ತಂದು ತಮ್ಮ ರೋಗಿಗಳಿಗೆ ಗಾಳಿಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಐಸಿಯುನ ಎಲ್ಲಾ ಕಿಟಕಿಗಳನ್ನು ತೆಗೆದಿರುವ ಸಿಬ್ಬಂದಿ, ಆರು ಏಳು ತಿಂಗಳಿಂದ ಇದೆ ಸಮಸ್ಯೆ ಇದೆ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ. ಈ ರೀತಿಯ ಅವ್ಯವಸ್ಥೆ ಇದೆ ಆದರೆ ಸರ್ಕಾರ ಈ ರೀತಿ ಇಟ್ಟರೆ ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸಚಿವ ಶರಣಪ್ರಕಾಶ ಪಾಟೀಲ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಇತ್ತ ಗಮನ ಹರಿಸಿ ಸಮಸ್ಯೆ ಬಹೆ ಹರಿಸಬೇಕು. ಬೇಜವಾಬ್ದಾರಿ ವಹಿಸುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.