ಕಲಬುರಗಿ: ಭಗವಂತ ಈಶ್ವರಪ್ಪ ಅವರಿಗೆ ಒಳ್ಳೆಯದನ್ನ ಮಾಡಲಿ ಅಂತಾ ಹಾರೈಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ, ಬಿಜೆಪಿಯಲ್ಲಿ ಬಂಡಾಯ ಎದ್ದಿರುವ ಈಶ್ವರಪ್ಪನವರ ಕುರಿತಂತೆ ಮಾತನಾಡಿದರು. ವಾಸ್ತವಿಕ ಪರಿಸ್ಥಿತಿ ಅರ್ಥ ಮಾಡಿಕೊಳ್ಳುತ್ತಾರೆ. ಈಶ್ವರಪ್ಪ ಅವರು ತಮ್ಮ ಪಕ್ಷೇತರ ಸ್ಪರ್ಧೆ ನಿರ್ಧಾರವನ್ನು ವಾಪಸ್ ಪಡೆಯುತ್ತಾರೆ ಎಂದು ನಾನು ನಂಬಿರುವೆ.
ಈ ಬಗ್ಗೆ ನಮ್ಮ ನಾಯಕರು ಈಶ್ವರಪ್ಪ ಜೊತೆ ಮಾತುಕತೆ ನಡೆಸಿದ್ದಾರೆ. ಎಲ್ಲರೂ ಸೇರಿ ಅವರ ಮನವೊಲಿಸುವ ಪ್ರಯತ್ನ ಮಾಡ್ತಾರೆ. ಹಾಗೊಂದು ವೇಳೆ ಅವರು ಪಕ್ಷೇತರಾಗಿ ಸ್ಪರ್ಧಿಸಿದರೆ ದೇವರು ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುವುದಾಗಿ ತಿಳಿಸಿದರು. ಕಲಬುರಗಿ ಬೀದರ್ ಇರಲಿ ಯಾವುದೇ ಲೋಕಸಭಾ ಇರಬಹುದು. ಎಲ್ಲಾ ಅಭ್ಯರ್ಥಿ ಗಳನ್ನ ತೀರ್ಮಾನ ಮಾಡಿರೋದು ಹೈಕಮಾಂಡ್ ಎಂದು ಹೇಳಿದರು