ಕಲಬುರಗಿ : ಕಲಬುರ್ಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿನ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಲಿಂಗಕ್ಕೆ ಶಿವರಾತ್ರಿ ದಿನದಂದು ಹಿಂದುಗಳಿಗೆ ಪೂಜೆ ಮಾಡಲು ಹೈಕೋರ್ಟ್ ಅನುಮತಿ ನೀಡಿದೆ.ಶ್ರೀರಾಮ ಸೇನೆಯ ಗೌರವ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಸೇರಿ 15 ಜನರಿಗೆ ಅವಕಾಶ ನೀಡಿದೆ.
ಮಾರ್ಚ್ ೮ ರಂದು ಆಳಂದ ಪಟ್ಟಣದ ಹೊರವಲಯದ ಕೊರಳ್ಳಿ ಪ್ರಗತಿ ಶಿಪ್ ನಲ್ಲಿನ ವಿಶೇಷ ಪೂಜೆ, ಹೋಮ ಬಿಲ್ವಾರ್ಚನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ.
ಇನ್ನೂ, ವಿಶೇಷ ಪೂಜೆ ಹಿನ್ನೆಲೆ ಆಳಂದ ಪಟ್ಟಣದ ಹಿಂದು ಮುಖಂಡ ಮಹೇಶ್ ಗೌಳಿ ಎಂಬಾತನನ್ನು ಗಡಿ ಪಾರು ಮಾಡಲಾಗಿದೆ. ನಾಲ್ಕು ತಿಂಗಳ ಕಾಲ ಗಡಿಪಾರಿಗೆ ಉಪ ವಿಭಾಗ ಅಧಿಕಾರಿ ರೂಪಿಂದರ್ ಕೌರ್ ಅವರು ಆದೇಶ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಸಾಧ್ಯತೆ ಹಿನ್ನೆಲೆ ಗಡಿ ಪಾರು ಮಾಡಲಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ಪೊಲೀಸ್ ಠಾಣೆಯ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಆಳಂದದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.