ಕಲಬುರಗಿ: ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಗಾದೆ ಮಾತು ಇದೆ. ಕೆಲವು ಮನೆಗಳಲ್ಲಿ ಅತ್ತೆ ಮಾತೇ ನಡಿದ್ರೇ, ಕೆಲವು ಮನೆಗಳಲ್ಲಿ ಸೊಸೆಯದ್ದೇ ದರ್ಬಾರ್. ಒಟ್ಟಿನಲ್ಲಿ ಮನೆಗಳಲ್ಲಿ ಅತ್ತೆ – ಸೊಸೆ ಹಾವು ಮುಂಗುಸಿ ತರ ಇರುತ್ತಾರೆ. ಹಾಗಾಗಿ ಬಹುತೇಕ ಸೊಸೆಯಂದಿರು ಅತ್ತೆ ಇರುವ ಮನೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಇಲ್ಲೊಂದು ಘಟನೆ ನೋಡಿದಾಗ ಸೊಸೆಗೆ ಅತ್ತೆಯ ಮೇಲಿನ ಸಿಟ್ಟು ಎಷ್ಟಿದೆ ಎಂದರೆ 50 ರೂಪಾಯಿ ನೋಟು ನೋಡಿದ್ರೆ ಗೋತ್ತಾಗುತ್ತೆ.
ನಮ್ಮ ಅತ್ತೆ ಬೇಗ ಹುಷಾರಾಗಿ ಬರಲಪ್ಪಾ ಅಂತ ದೇವರ ಬಳಿ ಪಾರ್ಥಿಸುವ ಸೊಸೆ ಬಗ್ಗೆ ಕೇಳಿರುತ್ತೇವೆ. ನೋಡಿರುತ್ತೇವೆ. ಆದರೆ ಇಲ್ಲೋಬ್ಬಳು ಸೊಸೆ ನಮ್ಮ ಅತ್ತೆ ಬೇಗ ಸಾಯಬೇಕು ಎಂದು ದೇವರಿಗೆ ಹರಕೆ ನೀಡಿರುವ ಘಟನೆ ಕಲಬುರುಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ದೇವಲಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದಿದೆ.
ಕಲಬುರಗಿಯ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದೇವರ ಹುಂಡಿಯಲ್ಲಿ ಕಾಣಿಕೆ ಹಾಕಿರುವ 50 ರೂಪಾಯಿ ಮುಖ ಬೆಲೆಯ ನೋಟ್ ಪತ್ತೆಯಾಗಿದೆ. ನೋಟಿನ ಮೇಲೆ ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ ಅನ್ನೋದನ್ನು ಬರೆಯಲಾಗಿದೆ. ಇದನ್ನು ಕಂಡು ಕೆಲವರು ಅಚ್ಚರಿಗೊಂಡಿದ್ದಾರೆ.


