ಕಲಬುರಗಿ : ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಓಕಳಿ ರಸ್ತೆಯಲ್ಲಿರೋ ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಶವ ಗೋಚರಿಸಿತ್ತು. ಶವ ನೋಡಿದವರು ಅಪಘಾತವಿರಬೇಕು ಅಂತ ಭಾವಿಸಿ ತಕ್ಷಣ ಕಮಲಾಪುರ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ರು.. ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಶವ ಕಂಡಿದೆ ಅನ್ನೋದು ಗೊತ್ತಾಗುತ್ತಲೇ ಸ್ಪಾಟಿಗೆ ಬಂದಿತ್ತು ಪೊಲೀಸ್ ಟೀಮ್.. ಸ್ಥಳಕ್ಕೆ ಬಂದ ಪೊಲೀಸ್ರು ಮೊದಲಿಗೆ ಶವವನ್ನ ಸೂಕ್ಷ್ಮವಾಗಿ ಗಮನಿಸಿ ನೋಡಿದ್ರು.. ಮುಖ ಊದಿಕೊಂಡಿತ್ತು..ಎದೆಯ ಮೇಲೆ ಚೂರಿಯಿಂದ ಚುಚ್ಚಿರೋ ಗುರುತಿತ್ತು.. ತಕ್ಷಣ ಪೊಲೀಸ್ರು ಅಲರ್ಟ್ ಆದ್ರು.. ನಿರ್ಜನ ಪ್ರದೇಶದಲ್ಲಿ ಶವವೊಂದು ಗೋಚರಿಸಿದೆ ಅಂತ ಗೊತ್ತಾದ ತಕ್ಷಣ ಸುದ್ದಿ ಸುತ್ತಮುತ್ತಲ ಊರುಗಳಿಗೂ ತಲುಪಿತ್ತು..
ಇತ್ತ ಅದೊಬ್ಬ ಹೆಣ್ಣು ಮಗಳ ಮನೆಯವರು ಗಂಡ ನಾಪತ್ತೆಯಾಗಿದ್ದಾನೆ ಅನ್ನೋ ಆತಂಕದಲ್ಲಿದ್ರು.. ಅಲ್ಲದೇ ಅದೇ ದಿನ ಠಾಣೆಗೆ ಬಂದು ಕೆಲಸಕ್ಕೆಂದು ಹೋದವನು ವಾಪಸ್ ಮನೆಗೆ ಬಂದಿಲ್ಲ ಅಂತ ಮಿಸ್ಸಿಂಗ್ ಕೇಸ್ ಕೊಟ್ಟಿದ್ರು.. ಅತ್ತ ಶವ ಸಿಗೋದಿಕ್ಕೂ ಮಿಸ್ಸಿಂಗ್ ಕೇಸ್ ರಿಜಿಸ್ಟರ್ ಆಗೊದಿಕ್ಕೂ ಒಂದೇ ಆಗಿತ್ತು..
ಡಿಸೆಂಬರ್ 29 ರಂದು ಕೆಲಸಕ್ಕೆ ಹೋದವನು ಮರಳಿ ಬಂದಿಲ್ಲ.. ಸಂಜೆಯಾದರೂ ಮನೆಗೆ ಬಂದಿಲ್ಲವೆಂದು ಗಾಬರಿಗೊಂಡು ಫೋನ್ ಮಾಡಿದ್ದಾರೆ. ಆದರೆ ಫೋನ್ ಸ್ವೀಚಾಫ್ ಬರ್ತಿತ್ತು.. ಎಲ್ಲೋ ಕೆಲಸದ ಮೇಲೆ ಹೋಗಿರಬೇಕು ಬರ್ತಾನೆ ಅಂದುಕೊಂಡು ಎರಡು ದಿನ ಸುಮ್ಮನಿದ್ರು… 2ನೇ ತಾರೀಖಿನಂದು ಕಮಾಲಪುರ ಠಾಣೆ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ರು.. ಇದೇ ವೇಳೆ ಓಕಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಅಂಬರಾಯನ ಶವ ಗೋಚರಿಸಿತ್ತು..
ತನಿಖೆಗಿಳಿದ ಪೊಲೀಸ್ರಿಗೆ ಶವ ಗೋಚರಿಸಿದ ನಾಲ್ಕೇ ದಿನದಲ್ಲಿ ಮೆಗಾ ಟ್ವಿಸ್ಟ್ ಸಿಕ್ಕಿತ್ತು.. ಕೇಸ್ ಬೆನ್ನತ್ತಿದ ಪೊಲೀಸರಿಗೆ ಶಾಕ್ ಅಗಿತ್ತು. ಯಾಕೆಂದ್ರೆ ಅಲ್ಲಿ ಕೊಲೆಗಾರರು ಬೇರ್ಯಾರು ಅಲ್ಲ, ಭೀಕರವಾಗಿ ಹತ್ಯೆಯಾಗಿರೋ ಅಂಬರಾಯ ಪಟ್ಟೆದಾರ್ ನ ಪತ್ನಿಯ ತಂಗಿಯೇ ಹತ್ಯೆಯ ಸೂತ್ರಧಾರಿ ಅನ್ನೋದು ಗೊತ್ತಾಗಿತ್ತು..ಪತ್ನಿ ತವರೂರಲ್ಲೇ ಇದ್ದ ಅಂಬಾರಾಯನ ಕಣ್ಣು ಪತ್ನಿ ತಂಗಿ ಮೇಲೆ ಬಿದ್ದಿತ್ತು.. ಅವಳು ಮತ್ತೊಬ್ಬನ ಪ್ರೀತಿ ಪ್ರೇಮ ಪ್ರಣಯದಲ್ಲಿದ್ಲು.. ಭಾವನ ಕಾಟ ಮಿತಿ ಮೀರಿದಾಗ ಪ್ರಿಯಕರನಿಗೆ ವಿಷಯ ತಿಳಿಸಿದ್ಲು.. ಅಷ್ಟೆ ಸಿದ್ದವಾಗಿತ್ತು ಸ್ಕೆಚ್ಚು. ಅಂದಾಗೆ ಅವಳೇ ಇವಳು..ಹೆಸ್ರು ಅಂಬಿಕಾ ಅಲಿಯಾಸ್ ರಾಧಿಕಾ.. ಈಕೆಯ ಮೇಲೆ ಕಣ್ಣಾಕಿದ ಕಾರಣಕ್ಕೆ ತನ್ನ ಪ್ರಿಯಕರನಿಗೆ ಹೇಳಿ ಕೊಲೆ ಮಾಡಿಸಿದ್ದಾಳೆ..ಇದೀಗ ಏಳು ಜನ ಆರೋಪಿಗಳು ಅಂದರ್ ಆಗಿದ್ದಾರೆ.