ರಾಜ್ಯಸುದ್ದಿ

ಮತ್ತೆ ಕಮಲ ಅರಳಲಿದೆ, ಮಳೆ, ಬೆಳೆ ಸಮೃದ್ಧಿ ಆಗಲಿದೆ ಕಾರ್ಣಿಕ ಭವಿಷ್ಯ

ಕಡೂರು: ‘ಹುಟ್ಟಿದ ಕಮಲ ಆಕಾಶ ಮೆಟ್ಟಿತು, ಮಳೆ ಬೆಳೆ ಸಂಪಾಯಿತಲೇ ಪರಾಕ್‌’ ಇದು ತಾಲೂಕಿನ ಜಿಗಣೇಹಳ್ಳಿ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕದ ನುಡಿ. ಇದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ವಿಜಯದ ಭವಿಷ್ಯ ನುಡಿದಿದ್ದಾರೆ.

ಭಾರತ ಹುಣ್ಣಿಮೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಣಿಕೋತ್ಸವದಲ್ಲಿ ಕಳೆದ ಎಂಟು ದಿನಗಳಿಂದ ಕಾರ್ಣಿಕ ನುಡಿಯುವ ಗಣಮಗ ಜಿಗಣೇಹಳ್ಳಿ ಮಂಜುನಾಥ್‌ ದೇವಸ್ಥಾನದ ಆವರಣದಲ್ಲಿರುವ ಬಿಲ್ವಪತ್ರೆ ಮರದಡಿಯಲ್ಲಿ ಹಾಕಲಾಗಿದ್ದ ಹಸಿರು ಚಪ್ಪರದಲ್ಲಿ ಉಪವಾಸ ವ್ರತ ಕೈಗೊಂಡಿದ್ದರು.

ಕಾರ್ಣಿಕದ ದಿನ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳ ನಂತರ ಹೊಳೆಪೂಜೆ ನಡೆದು ಬಿಲ್ಲನೇರಿದ ಗಣಮಗ ಸದ್ದಲೇ ಎಂದು ಕೂಗಿದಾಗ ಮೌನ ಆವರಿಸಿತು. ‘ಹುಟ್ಟಿದ ಕಮಲ ಆಕಾಶ ಮೆಟ್ಟಿತು. ಮಳೆ ಬೆಳೆ ಸಂಪಾಯಿತಲೇ ಪರಾಕ್‌’ ಎಂದು ಕಾರ್ಣಿಕ ನುಡಿದಾಗ ಜನರು ಹರ್ಷೋದ್ಘಾರ ಮಾಡಿದರು. ಮುಂದಿನ ವರ್ಷ ಮಳೆ ಬೆಳೆ ಸಮೃದ್ಧವಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಕಮಲ ಮತ್ತೆ ಅರಳುತ್ತದೆ ಎಂದು ಸ್ಥಳೀಯರು ಕಾರ್ಣಿಕ ನುಡಿಯನ್ನು ಅರ್ಥೈಸಿದ್ದಾರೆ.

ಉತ್ತರ ಕರ್ನಾಟಕದ ಮತ್ತೊಂದು ಪ್ರಸಿದ್ಧ ಕ್ಷೇತ್ರವಾಗಿರುವ ಧಾರವಾಡ ಜಿಲ್ಲೆಯ ದೇವರಗುಡ್ಡ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ “ಸಿರಿನಾಡಿಗೆ ಬಂಗಾರದ ಗಿಳಿ ಬಂದು ಕೊಲೆ ತೇಲೆ ಪರಾಕ್ ಮುತ್ತಿನ ಗುರಿ ಮುಟ್ಟಿತು, ಬೆಳ್ಳಿ ತೊಟ್ಟಿಲು ಕಟ್ಟಿತು, ಕಷ್ಟ ಪಟ್ಟ ಮನುಷ್ಯನಿಗೆ ಮುತ್ತಿನ ದಾರಿ ಸಿಕ್ಕಿತ್ತಲೇ ಪರಾಕ್” ಎಂದು ಕಾರ್ಣಿಕ ನುಡಿಯಲಾಗಿತ್ತು. ಇದು ಸಹ ಈ ಬಾರಿ ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿದೆ ಎಂಬುದರ ಸಂಕೇತ ಎಂದು ಜನ ವಿಶ್ಲೇಷಣೆ ಮಾಡಿದ್ದರು. ಇದೀಗ ಜಿಗಣೇಹಳ್ಳಿಯ ಕಾರ್ಣಿಕದಲ್ಲೂ ಉತ್ತಮ ಮಳೆಬೆಳೆಯ ಸೂಚನೆ ದೊರೆತಿರುವುದು ನಾಡಿನ ಜನರ ಸಂತಸಕ್ಕೆ ಕಾರಣವಾಗಿದೆ.

ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ವಿಜಯನಗರ ದಿಲ್ಲೆ ಹೂವಿನಹಡಗಲಿ ಸಮೀಪದ ಸುಕ್ಷೇತ್ರ ಮೈಲಾರಲಿಂಗೇಶ್ವರ ಸ್ವಾಮಿಯ ಭವಿಷ್ಯವಾಣಿ ಕಾರ್ಣಿಕೋತ್ಸವದಲ್ಲಿ “ಮಳೆ ಬೆಳೆ ಎಲ್ಲಾ ಸಂಪಾಗುತ್ತದೆ, ರೈತರಿಗೆ ಈ ಬಾರಿ ಒಳ್ಳೆಯದಾಗುತ್ತದೆ” ಇದು ಈ ವರ್ಷ ಭರವಸೆ ಮೈಲಾರ ಲಿಂಗೇಶ್ವರ ಕಾರ್ಣಿಕ ಹುಟ್ಟಿಸಿದ್ದರು. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಈ ವರ್ಷದ ದೈವವಾಣಿಯನ್ನು ರಾಮಪ್ಪ ಗೊರವಯ್ಯ ನುಡಿದಿದ್ದಾರೆ.

Comments (0)

Your email address will not be published. Required fields are marked *

Back to top button