ಹುಬ್ಬಳ್ಳಿ : ಅನ್ಯಾಯ ಪ್ರಶ್ನೆ ಮಾಡಿದ ಮಹದಾಯಿ ಹೋರಾಟಗಾರ ವೀರೇಶ ಸೊಬರದಮಠ ಎಂಬುವವರಿಗೆ ವ್ಯಾಟ್ಸ್ ಅಪ್ ಮೂಲಕ ಆಡಿಯೋ ಕಳುಹಿಸಿ ಜೀವ ಬೆದರಿಕೆ ಹಾಕಿದ್ದಾರೆ.
ಸಿದ್ದಪ್ಪಾ ಮರಿಸಿದ್ದ ಎಂಬುವವರಿಂದ ಡಿ.29 ರಂದು ಸೊಬರದಮಠ ವ್ಯಾಟ್ಸ್‌ಪ್ ನಂಬರ್ಗೆ ಬೆದರಿಕೆ ಹಾಕಿದ್ದ ಆಡಿಯೋ ತಡವಾಗಿ ಬೆಳಕಿಗೆ ಬಂದಿದೆ. ನಮಗೆ ಜೀವದ ಮೇಲೆ ಆಸೆ ಇಲ್ಲ, ನಮ್ಮ ವಿರುದ್ಧದ ಹೋರಾಟ ನಿಲ್ಲಿಸಿ ಸರಿ ಮಾಡಿಕೊಳ್ಳಲಿ, ಇಲ್ಲವಾದಲ್ಲಿ ನಾವು ಜೀವ ಕಳೆದುಕೊಳ್ಳಲು ಸಿದ್ಧ ಅಥವಾ ಜೀವ ತೆಗೆಯಲು ರೆಡಿ ಎಂದು ಬೆದರಿಕೆ ಹಾಕಿದ್ದಾರೆ.
ತೀರ್ಲಾಪೂರ ಗ್ರಾಮದ ಹೊರವಲಯದಲ್ಲಿ ಸಿದ್ದಪ್ಪ ಹಾಗೂ ಮಹದೇವಪ್ಪ ಗೌಳಿ ಎಂಬುವವರು ಕಾನೂನು ಬಾಹಿರ ನಿವೇಶನ ಮಾಡಿಸಿದ್ದರು. ಕೆಜೆಪಿ, ಎನ್ ಎ ಹಾಗೂ ಪಂಚಾಯತಿ ಅನುಮತಿ ಪಡೆಯದೇ ನಿವೇಶನ ಮಾಡಿ ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆ ಸೊಬರದಮಠ ಅವರು ನಿವಾಸಿಗಳಿಗೆ ಮೂಲಭೂತ ಸೌಕರ್ಯಕ್ಕಾಗಿ ಪಂಚಾಯತಿಯಲ್ಲಿ ಮನವಿ ನೀಡಿದ್ದಾರೆ. ನಿವಾಸಿಗಳಿಗೆ ಮೂಲಭೂತ ಸೌಕರ್ಯ ನೀಡಲು ಬರುವುದಿಲ್ಲ. ಕಾನೂನು ಬಾಹಿರವಾಗಿ ನಿವೇಶನ ಮಾಡಲಾಗಿದೆ ಎಂದು ಪಂಚಾಯತಿ ಅಧಿಕಾರಿಗಳಿಗೆ ಹಿಂಬರಹ ನೀಡಿದರು. ಬಳಿಕ ಜಿಲ್ಲಾಡಳಿತಕ್ಕೆ ಇದರ ಕುರಿತು ಸೊಬರದಮಠ ಮನವಿ ಮಾಡಿದ ಹಿನ್ನೆಲೆ ಹೋರಾಟದಿಂದ ಹಿಂದೆ ಸರಿಯುವಂತೆ ಸಿದ್ದಪ್ಪಾ ಮರಿಸಿದ್ದ ಎಂಬುವವರು ಬೆದರಿಕೆ ಹಾಕಿದ್ದಾರೆ.
ಈ ಕುರಿತು ನವಲಗುಂದ ಪೊಲೀಸ್ ಠಾಣೆಗೆ ಸೊಬರದಮಠ ದೂರು ನೀಡಲಾಗಿತ್ತು. ಬೆದರಿಕೆ ಹಿಂದೆ ರಾಜಕೀಯ ಕೈವಾಡವಿದೆ, ಈ ಅಡಿಯೋ ಪ್ರಕರಣ ಸಂಪೂರ್ಣ ತನಿಖೆಯಾಗಬೇಕು. ಆಡಿಯೋ ಹಿಂದಿರುವ ಶಕ್ತಿಗಳನ್ನು ಬಂಧಿಸಲು ವೀರೇಶ ಸೊಬರದಮಠ ಒತ್ತಾಯಿಸಿದ್ದಾರೆ.