ರಾಜ್ಯಸುದ್ದಿ

ಶಾಲೆಯ ಉಳಿವಿಗಾಗಿ ಹಳೆ ವಿದ್ಯಾರ್ಥಿಗಳು ಪ್ರೊಟೆಸ್ಟ್

ಹುಬ್ಬಳ್ಳಿ : 156 ವರ್ಷ ಇತಿಹಾಸ ಹೊಂದಿದ್ದ ಶಾಲೆಯನ್ನು ನೆಲಸಮ ಮಾಡಿ ಮಲ್ಟಿಪ್ಲೆಕ್ಸ್ ಕಾಂಪ್ಲೆಕ್ಸ್ ಮಾಡುವ ನಿರ್ಧಾರವನ್ನು ಖಂಡಿಸಿ ಹಾಗೂ ಕಾಂಪ್ಲೆಕ್ಸ್ ನಿರ್ಧಾರವನ್ನು ಕೈ ಬೀಡುವಂತೆ ಅಗ್ರಹಿಸಿ, ಹುಬ್ಬಳ್ಳಿಯಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳು ಬೀದಿಗೆ ಇಳಿದು ಆಕ್ರೋಶ ಹೊರಹಾಕಿದರು.

 

ನಗರದ ದುರ್ಗದ ಬೈಲ್‌ನ ಬ್ರಾಡವೇ ರಸ್ತೆಯಲ್ಲಿರುವ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ‌ ನಂ.೨ ಆವರಣದಲ್ಲಿ ಜಮಾವಣೆಗೊಂಡ ಹಳೇ ವಿದ್ಯಾರ್ಥಿಗಳು, ಸರ್ಕಾರ ಹಾಗೂ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಐತಿಹಾಸಿಕ ಹಿನ್ನೆಲೆ ಹೊಂದಿರುವ ನಮ್ಮ ಶಾಲೆಯನ್ನು ಉಳಿಸಬೇಕು‌. ಈ ಕುರಿತಂತೆ ಹು-ಧಾ ಮಹಾನಗರ ಪಾಲಿಕೆಯಾಗಲಿ ಅಥವಾ ಸರ್ಕಾರವಾಗಲಿ ಶಾಲೆಯನ್ನು, ಸ್ಥಳಾಂತರ ಮಾಡುವಂತಹ ದುಸ್ಸಾಹಸಕ್ಕೆ ಮುಂದಾಗಬಾರದು. ಸರ್ಕಾರಿ ಅಧಿಕಾರಿಗಳೆಲ್ಲಾ ಬಹುತೇಕ ಸರ್ಕಾರಿ ಶಾಲೆಯಲ್ಲಿಯೇ ಕಲಿತಿದ್ದಾರೆ. ಮಕ್ಕಳ ಮನಸ್ಸಿಗೆ ಧಕ್ಕೆ ತರುತ್ತಿದ್ದಾರೆ, ತಕ್ಷಣ ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ಶಾಲೆಗೆ ದಕ್ಕೆಯಾದಲ್ಲಿ ಉಗ್ರ ಹೋರಾಟಕ್ಕೆ ನಾವು ಮುಂದಾಗುತ್ತೇವೆ ಎಂದು ಶಾಲೆಯ ಹಳೇ ವಿದ್ಯಾರ್ಥಿಗಳು ಖಡಕ್ ಎಚ್ಚರಿಕೆ ನೀಡಿ, ಹುಧಾ ಮಾಹಾನಗರ ಪಾಲಿಕೆ ಮೇಯರ ವೀಣಾ ಬಾರದ್ವಾಡ್ ಅವರಿಗೆ ಮನವಿ ಸಲ್ಲಿಸಿದರು. ‌ಜೊತೆಗೆ ಮೇಯರ್ ಅವರು ಶಾಲೆ ಉಳಿವಿಗಾಗಿ ಸರ್ವ ಪ್ರಯತ್ನಾ ಮಾಡುವುದಾಗಿ ಭರವಸೆ ನೀಡಿದರು. ‌

Comments (0)

Your email address will not be published. Required fields are marked *

Back to top button