ಹುಬ್ಬಳ್ಳಿ : ಕೇಂದ್ರ ಸರ್ಕಾರದ ಅಪಘಾತ ಪ್ರಕರಣ ಕಾಯ್ದೆ ತಿದ್ದುಪಡಿ ಸೇರಿದಂತೆ ಹಿಂಟ್ ಆ್ಯಂಡ ರನ್ ಕಾಯ್ದೆ ತಿದ್ದುಪಡಿ ವಿರೋಧಿಸಿ, ಹುಬ್ಬಳ್ಳಿಯಲ್ಲಿ ವಾಹನ ಚಾಲಕರು ಹಾಗೂ ಮಾಲೀಕರು ಪ್ರತಿಭಟನೆ ಮೆರವಣಿಗೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಹು-ಧಾ ಗೂಡ್ಸ್ ಟ್ರಾನ್ಸಪೊಟರ್ಸ್ ಆ್ಯಂಡ್ ಲಾರಿ ಓನರ್ಸ್ ಅಸೋಸಿಯೇಶನ್, ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ, ನಗರದ ದುರ್ಗದ್ ಬೈಲ್‌ನಿಂದ ಸಂಗೊಳ್ಳಿರಾಯಣ್ಣ ವೃತದ ಬಳಿಯ ತಹಶಿಲ್ದಾರ ಕಚೇರಿಯವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು.
ಇನ್ನೂ ಮೆರವಣಿಗೆ ಉದ್ದಕ್ಕೂ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಈಗಾಗಲೇ ಹಿಟ್ ಅಂಡ್ ರನ್ ಕೇಸ್‍ಗೆ ಹತ್ತು ವರ್ಷ ಜೈಲು ಶಿಕ್ಷೆ, ಹಾಗೂ 7 ಲಕ್ಷ ರೂಪಾಯಿ ದಂಡ ವಿಧಿಸುವ ನಿಯಮವನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಇದು ಜನ ವಿರೋಧಿ ಕಾನೂನು, ಇದು ಲಾರಿ ಚಾಲಕರಿಗೆ ಅಷ್ಟೇ ಅಲ್ಲದೆ, ಪ್ರತಿಯೊಂದು ವಾಹನ ಸವಾರರಿಗೆ ಸಂಬಂಧ ಪಡುತ್ತದೆ. ಅವರ ಕಡಿಮೆ ವೇತನದಲ್ಲಿ ಇಂತಹ ಘಟನೆ ಆದರೆ ನಿಭಾಯಿಸುವುದು ಹೇಗೆ..?. ಅಲ್ಲದೇ ಅಷ್ಟೊಂದು ಹಣ ಮತ್ತು10 ವರ್ಷ ಜೈಲು ಶಿಕ್ಷೆ ಕೊಟ್ಟರೆ, ಅವರ ಕುಟುಂಬ ಬೀದಿಗೆ ಬರುತ್ತದೆ. ಕೇಂದ್ರ ಸರ್ಕಾರದ ಈ ಕಾನೂನು ವಾಹನ ಸವಾರರಿಗೆ ತುಂಬಾ ತೊಂದರೆಯಾಗಲಿದ್ದು ಹಿಂಪಡೆಯಬೇಕು ಎಂಬುದು ಪ್ರತಿಭಟನಾಕಾರರು ಆಗ್ರಹಿಸಿ, ತಹಶಿಲ್ದಾರ ಮೂಲಕ ರಾಷ್ಟ್ಟಪತಿಗಳಿಗೆ ಮನವಿ ಸಲ್ಲಿಸಿದರು. ಒಂದು ವೇಳೆ ಕೆಂದ್ರ ಸರ್ಕಾರ ತಮ್ಮ ನಿರ್ಧಾರ ಬದಲಾಯಿಸದೇ ಇದ್ದಲ್ಲಿ ಉಗ್ರ ಹೋರಾಟಕ್ಕೆ ನಾವು ಮುಂದಾಗಬೇಕಾಗುತ್ತದೆಎಂದು ಎಚ್ಚರಿಕೆ ನೀಡಿದರು.