ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಬಡವರ ಗುಡಿಸಲು ತೆರವು ವಿರೋಧಿಸಿ ರಾಜಗೋಪಾಲ್ ಮತ್ತು ವಲ್ಲಭಭಾಯಿ ನಿವಾಸಿಗಳಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕರ್ನಾಟಕ ಮಾದಿಗ ದಂಡೋರ್ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಸ್ಟೇಷನ್ ರಸ್ತೆ ಡಾ.ಅಂಬೇಡ್ಕರ್ ಮೂರ್ತಿಯಿಂದ ತಹಶಿಲ್ದಾರ ಕಚೇರಿಯವರೆಗೆ ಮೆರವಣಿಗೆ ಮಾಡುವ ಮೂಲಕ ತಮಟೆ ಬಡಿಯುತ್ತಾ ಪ್ರತಿಭಟನೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನೋಟಿಸ್ ನೀಡದೇ ರಾಜಗೋಪಾಲ್ ಮತ್ತು ವಲ್ಲಭಭಾಯಿ ನಗರದ ಬಡ ಕುಟುಂಬಗಳ ಗುಡಿಸಲು ತೆರವು ಮಾಡಲಾಗಿದೆ. ಜಿಲ್ಲಾಡಳಿತದ ಏಕಾಏಕಿ ಕ್ರಮದಿಂದ ಹಲವು ಬಡ ಕುಟುಂಬಗಳು ಈಗ ಬೀದಿಗೆ ಬಂದಿವೆ ಎಂದು ಸರ್ಕಾರ ಹಾಗೂ ಢಾರವಾಡ ಜಿಲ್ಲಾಡಳಿತ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಈಗಾಗಲೇ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ನೀಡಿಲಾಗಿದೆ. ಜಿಲ್ಲಾ ಉಸ್ತುವಾರಿಯವರೆಗೂ ತಿಳಿಸಿದರು ಯಾವುದೇ ಪರಿಹಾರ ಸಿಗುತ್ತಿಲ್ಲ. ಈ ಕೂಡಲೇ ಸರ್ಕಾರ ಗುಡಿಸಲು ತೆರವು ಮಾಡಿದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಅಗ್ರಹಿಸಿದರು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.