Wednesday, April 30, 2025
24 C
Bengaluru
LIVE
ಮನೆಕ್ರೈಂ ಸ್ಟೋರಿಪ್ರಿಯಕರನೊಂದಿಗೆ ಸೇರಿ ಗಂಡನ ಕೊಲೆ ಮಾಡಿದ ಪತ್ನಿ

ಪ್ರಿಯಕರನೊಂದಿಗೆ ಸೇರಿ ಗಂಡನ ಕೊಲೆ ಮಾಡಿದ ಪತ್ನಿ

ಹುಬ್ಬಳ್ಳಿ : ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ, ಪ್ರಿಯಕರನ ಜೊತೆ ಸೇರಿ ಗಂಡನ‌ ಕೊಲೆ ಮಾಡಿದ ಆರೋಪದ‌ ಮೇಲೆ ಪ್ರೀಯಕರ ಹಾಗೂ ಪ್ರೇಮಿಯನ್ನು ಬಂಧಿಸುವಲ್ಲಿ ನವನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಜನವರಿ 10 ರಂದು ಎಪಿಎಂಸಿ ಮಾರಡಗಿ ರೋಡ್‌ನಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ನವನಗರ ಪೊಲೀಸರು ಮೃತನಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದರು. ಮೃತನನ್ನು ಹುಬ್ಬಳ್ಳಿ ಬಂಜಾರ ಕಾಲೋನಿ ನಿವಾಸಿ ಚಂದ್ರಶೇಖರ ಲಮಾಣಿ(40) ಎಂದು ಗುರುತಿಸಲಾಗಿತ್ತು. ಪತ್ನಿ ಮಂಜುಳಾ ಗಂಡನ ಸಾವಿನ ಬಗ್ಗೆ ಅನುಮಾನ‌ ವ್ಯಕ್ತಪಡಿಸದೇ ಕುಡಿಯಿತ್ತಿದ್ದ ಎಂದು ಹೇಳಿ ಸರಿದುಕೊಂಡಿಲ್ಲಂತೆ. ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮೃತ ಸಂಬಂಧಿಗಳು ಎಪಿಎಂಸಿ ಠಾಣೆಯಲ್ಲಿ ದೂರು ನೀಡಿದ್ದರು.‌ ನವನಗರ ಪೊಲೀಸರು ಎಲ್ಲಾ ಮೂಲಗಳಿಂದ ತನಿಖೆ ಮಾಡಿ ಸತ್ಯಾಂಶವನ್ನ ಹೊರ ತಂದಿದ್ದಾರೆ.

ಪತ್ನಿ ಮಂಜುಳಾ ಮತ್ತು ಪ್ರೀಯಕರ ರಿಯಾಜ್ ಅಹ್ಮದ್ ಕೊಲೆ ಮಾಡಿರುವ ಬಗ್ಗೆ ಪೊಲೀಸರು ತನಿಖೆಯಲ್ಲಿ ದೃಢಪಟ್ಟಿದೆ. ಇವರಿಬ್ಬರ ಅನೈತಿಕ ಸಂಬಂಧಕ್ಕೆ ಪತಿ ವಿರೋಧ ವ್ಯಕ್ತಪಡಿಸಿದ್ದ. ವಿಷಯ ಗೊತ್ತಾದ ನಂತರ ಗಂಡ ನಿತ್ಯ ಕಿರುಕುಳ ನೀಡುತ್ತಿದ್ದ. ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂದು ಪ್ರೀಯಕರನಿಗೆ ಹೇಳಿ ಕೊಲೆ ಮಾಡಿಸಿರುವುದಾಗಿ ಪೊಲೀಸರ ಎದುರು ಪತ್ನಿ ಸತ್ಯ ಬಿಚ್ಚಿಟ್ಟಿದ್ದಾಳೆ. ನಾನೇ ಚಂದ್ರಶೇಖರನನ್ನ ಕರೆದು ಹೋಗಿ ಕೊಲೆ ಮಾಡಿದ್ದೇನೆಂದು ರಿಯಾಜ್ ಅಹ್ಮದ್ ಒಪ್ಪಿಕೊಂಡಿದ್ದಾನೆ.

ಕಳೆದ ಐದು ವರ್ಷಗಳಿಂದ ನಮ್ಮಿಬ್ಬರ ನಡುವೆ ಅನೈತಿಕ ಸಂಬಂಧ ಇತ್ತು. ಇದಕ್ಕೆ ಚಂದ್ರಶೇಖರ ವಿರೋಧ ಮಾಡ್ತಾ ಇದ್ದ. ಆದ್ದರಿಂದ ಕೊಲೆ ಮಾಡಿರುವದಾಗಿ ರಿಯಾಜ್ ಅಹ್ಮದ್ ನಿಜಾಂಶ ಬಾಯಿಬಿಟ್ಟಿದ್ದಾನೆ. ಪತ್ನಿಯ ಅನೈತಿಕ ಸಂಬಂಧ ಗಂಡ ಕೊಲೆಯಾದ್ರೆ, ಮಾಡಬಾರದ ತಪ್ಪು ಮಾಡಿ ಪತ್ನಿ ಜೈಲು ಪಾಲಾಗಿದ್ದಾಳೆ. ಪತ್ನಿ ಮಾಡಿದ ಕೃತ್ಯಕ್ಕೆ ಮೂರು ಮಕ್ಕಳು ಅನಾಥವಾಗಿವೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments