ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತ್ತೆ ಪುಡಾರಿಗಳು ಹಾವಳಿ ಹೆಚ್ಚಾಗಿದ್ದು, ರಾತ್ರಿ ಊಟ ಮುಗಿಸಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಮಂಟೂರು ರಸ್ತೆಯ ಏಕತಾ ಕಾಲೋನಿಯಲ್ಲಿ ಬಳಿ ನಡೆದಿದೆ. ಪುಡಾರಿಗಳ ಕೃತ್ಯದ ವಿಡಿಯೋ ವೈರಲ್ ಆಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Video Player
00:00
00:00
ಗಾಂಜಾ ಎಣ್ಣೆ ನಶೆಯಲ್ಲಿ ಮಣಿಕಂಠ ವಡ್ಡರ, ಸಾಹಿಲ್, ಮತ್ತೊರ್ವ ವ್ಯಕ್ತಿ ಸೇರಿಕೊಂಡು ಗೈಬುಸಾಬ ಹಕ್ಕಿಮ್ (29) ಎಂಬಾತನ ಮೇಲೆ ಏಕಾಏಕಿ ಗಲಾಟೆ ಮಾಡಿ ಕಾಲಿನಿಂದ ಒದ್ದು, ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಗಂಭೀರ ಗಾಯಗೊಂಡ ಗೈಬುಖಾನ್ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನು ಪುಂಡರ ಅಟ್ಟಹಾಸದ ದೃಶ್ಯಗಳು ಅಲ್ಲಿಯೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೋಲಿಸರು ಕಡಿವಾಣ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ಬೆಂಡಿಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.