ಸಿನಿಮಾಸುದ್ದಿ

“ಕರಟಕ ದಮನಕ” ಚಿತ್ರ ಬಿಡುಗಡೆಗೆ ಕ್ಷಣಗಣನೆ

ಹುಬ್ಬಳ್ಳಿ ; ಕರುನಾಡ ಚಕ್ರವರ್ತಿ ಶಿವರಾಜಕುಮಾರ ಹಾಗೂ ಇಂಡಿಯನ್ ಮೈಕಲ್‌ಜಾಕ್ಸನ್ ಎಂದೇ ಕ್ಯಾತಿ ಹೊಂದಿರುವ ಪ್ರಭುದೇವ ನಟನೆಯ ಕರಟಕ ದಮನಕ ಚಿತ್ರ ಬಿಡುಗಡೆಗೆ ಕ್ಷಣನೆ ಶುರುವಾಗಿದೆ. ಶಿವಣ್ಣ, ಪ್ರಭುದೇವ್ ಅಭಿಮಾನಿಗಳ ಬಹುದಿನದ ನಿರೀಕ್ಷೆ ಇದೀಗ ಅಂತಿಮ ಘಟ್ಟ ತಲುಪಿದಂತಾಗಿದೆ. ಇದೇ ಮಾರ್ಚ್ 8ಕ್ಕೆ ಚಿತ್ರ ರಾಜ್ಯವ್ಯಾಪಿ ಬಿಡುಗಡೆಗೆ ವೇದಿಕೆ ಸಿದ್ದವಾಗಿದೆ. ಹುಬ್ಬಳ್ಳಿಯಲ್ಲಿ ಬುಧವಾರ ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ಚಿತ್ರದ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಕ್ ಲೈನ್ ಎಂಟರ್ಟೈನ್ ಮೆಂಟ್ಸ್ ಮೂಲಕ, ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣದ, ಯೋಗರಾಜ್ ಭಟ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಬಹುನಿರೀಕ್ಷಿತ ಕರಟಕ ದಮನಕ’ ಚಿತ್ರ ಫೆ 8ರಂದು ಬಿಡುಗಡೆಯಾಗಲಿದೆ. ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರೂ ಚಿತ್ರ ನೋಡಿ ಆರ್ಶೀವಾದ ಮಾಡಬೇಕು. ಚಿತ್ರದಲ್ಲಿ ಒಟ್ಟು 6 ಹಾಡುಗಳಿವೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ, “ಡೀಗ ಡಿಗರಿ” ಹಾಡಿಗೆ ಭಟ್ಟರ ಸಾಹಿತ್ಯವಿದ್ದು, ಶಿವರಾಜಕುಮಾರ್ ಹಾಗೂ ಪ್ರಭುದೇವ ಅವರು ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ.
ಹಿರಿಯ ನಟ ದೊಡ್ಡಣ್ಣ ಅವರ ಊರು ಮತ್ತು ನೀರಿನ ಮೇಲೆ ಈ ಚಿತ್ರದ ಕಥೆ ಸಾಗುತ್ತದೆ ಎಂದು ಇದೇವೇಳೆ ಅವರು ತಿಳಿಸಿದರು. ಚಿತ್ರದ ಟೈಟಲ್ ಬಗ್ಗೆ ವಿವರಿಸಿದ ಅವರು, “ಕರಟಕ ದಮನಕ” ಎಂದರೆ ಎರಡು ಕುತಂತ್ರಿ ನರಿಗಳ ಹೆಸರು. ಸಾಮಾನ್ಯವಾಗಿ ಯಾವಾಗಲೂ ಒಟ್ಟಿಗೆ ಇಬ್ಬರನ್ನು ಹೆಚ್ಚು ಸಲ ನೋಡಿದಾಗ ಅವರನ್ನು “ಕರಟಕ ದಮನಕ” ಎನ್ನುತ್ತಾರೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯಾಗಿದ್ದು. ಈ ಚಿತ್ರ ನೋಡಿದ ಪ್ರತಿಯೊಬ್ಬ ವ್ಯಕ್ತಿಗೂ, ಅವನ ಊರು, ಆ ಊರಿನಲ್ಲಿ ಎಳೆದ ತೇರು ಹಾಗೂ ಅವನು ಯಾವ ನೀರು ಕುಡಿದು ಬೆಳೆದಿದ್ದಾನೋ ? ಆ ನೀರು ನೆನಪಾಗುತ್ತದೆ. ಎಲ್ಲರಿಗೂ ಒಂದು ಊರು ಇರುತ್ತದೆ. ಆ ಊರನ್ನು ಬಿಟ್ಟು ಬಂದ ಮೇಲೆ ಪುನಃ ಹೋದಾಗ ಅಲ್ಲಿ ಸಾಕಷ್ಟು ಬದಲಾವಣೆ ಆಗಿರುತ್ತದೆ. ಆ ವಿಷಯ ಇಟ್ಟುಕೊಂಡು ಸಾಕಷ್ಟು ಮನೋರಂಜನೆಯ ಅಂಶಗಳೊಂದಿಗೆ ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ಚಿತ್ರದಲ್ಲಿ ಇಬ್ಬರು ಸ್ಟಾರ್ ನಟರಾದ ಪ್ರಭುದೇವ ಮತ್ತು ಶಿವರಾಜಕುಮಾರ ನಟಿಸಿದ್ದಾರೆ. ಉತ್ತಮವಾದ ಚಿತ್ರವಾಗಿದೆ. ಎಲ್ಲರೂ ನೋಡಿ ಆರ್ಶೀವಾದ ಮಾಡಲು ಅವರು ಕೋರಿಕೊಂಡಿದ್ದಾರೆ.‌

ಇನ್ನೂ ಪ್ರಭುದೇವ ಜೊತೆ ನಿಶ್ವಿಕಾ ನಾಯ್ಡು ಸ್ಕ್ರಿನ್ ಶೆರ್ ಮಾಡಿರುವ ಬಗ್ಗೆ ಮಾತನಾಡಿದ ನಟಿ ನಿಶ್ವಿಕಾ, ಇಬ್ಬರು ದಿಗ್ಗಜ ಸ್ಟಾರ್ ನಟರು ಇರೋ ಚಿತ್ರದಲ್ಲಿ, ನನಗೆ ‌ಅವಕಾಶ ಸಿಕ್ಕಿರುವುದು ತುಂಬಾ ಪುಣ್ಯ. ಉತ್ತರ ಕರ್ನಾಟಕದ ಮೂಲ ಹೊಂದಿರುವ ಚಿತ್ರ ಇದಾಗಿದ್ದು, ಉತ್ತಮ ಚಿತ್ರವಾಗಿದೆ. ಎಲ್ಲರೂ ಫ್ಯಾಮಿಲಿಯೊಂದಿಗೆ ಬಂದು ಚಿತ್ರ ನೋಡಬೇಕು ಎಂದು ನಿಶ್ವಿಕಾ ಹೇಳಿದರು.‌

Comments (0)

Your email address will not be published. Required fields are marked *

Back to top button